ಸನ್ಮಾರ್ಗ ವಾರ್ತೆ
ಲಕ್ನೊ, ಮಾ. 20: ಲಕ್ನೊದಲ್ಲಿ ನಾಲ್ಕು ಮಂದಿಗೆ ಹೊಸದಾಗಿ ಕೊರೊನಾ ದೃಢಪಟ್ಟಿದೆ. ಇದರೊಂದಿಗೆ ಉತ್ತರ ಪ್ರದೇಶದಲ್ಲಿ ರೋಗಪೀಡಿತರ ಸಂಖ್ಯೆ ಒಂಬತ್ತಕ್ಕೇರಿಕೆಯಾಗಿದೆ. ಉತ್ತರ ಪ್ರದೇಶದಲ್ಲಿ ಮತ್ತು ಪಂಜಾಬ್, ಪಶ್ಚಿಮಬಂಗಾಳದಲ್ಲಿ ಶುಕ್ರವಾರ ಕೊರೊನಾ ಪೀಡಿತರು ಕಂಡು ಬಂದಿದ್ದಾರೆ.
ಇಂಗ್ಲೆಂಡಿನಿಂದ ಬಂದ ಅರುವತ್ತೊಂಬತ್ತು ವರ್ಷದ ಮಹಿಳೆಗೆ ಪಂಜಾಬ್ನ ಮೊಹಾಲಿಯಲ್ಲಿ ಹೊಸದಾಗಿ ರೋಗ ಕಂಡು ಬಂತು. ಇಲ್ಲಿ ಮೂರು ಮಂದಿಗೆ ಕೊರೊನಾ ಇದೆ. ಪಶ್ಚಿಮ ಬಂಗಾಳದಲ್ಲಿ ಎರಡನೆ ವ್ಯಕ್ತಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಇಂಗ್ಲೆಂಡಿನಿಂದ ಬಂದ ವ್ಯಕ್ತಿಯಲ್ಲಿ ಕೊರೊನಾ ಕಂಡು ಬಂತು. ದೇಶದಲ್ಲಿ ರೋಗ ಪೀಡಿತರ ಸಂಖ್ಯೆ 200ಕ್ಕೇರಿಕೆಯಾಗಿದೆ. ಕೊರೊನಾ ಪ್ರತಿರೋಧ ನಿಟ್ಟಿನಲ್ಲಿ ದೇಶದ ಗಡಿ ಮುಚ್ಚಿಡಲಾಗಿದೆ. 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಮತ್ತು ಹತ್ತು ವರ್ಷಕ್ಕಿಂತ ಕೆಳಗಿನ ಮಕ್ಕಳು ಹೊರಗೆ ಹೋಗಬಾರದೆಂದು ಕೇಂದ್ರ ಸರಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.












