ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮಾ. 20: ಜಗತ್ತಿನಾದ್ಯಂತ ಹರಡುತ್ತಿರುವ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 10,000 ದಾಟಿದೆ. ಇಟಲಿಯಲ್ಲಿ ಮತ್ತು ಸ್ಪೈನ್ನಲ್ಲಿ ಸಾವಿನ ಸಂಖ್ಯೆ ಹೆಚ್ಚಳವಾಗಿದೆ. ಒಟ್ಟು 10,049 ಮಂದಿ ಮೃತಪಟ್ಟಿದ್ದಾರೆ. ಜಾಗತಿಕ ಮಟ್ಟದಲ್ಲಿ ಈವರೆಗೆ 2,45,671 ಮಂದಿಗೆ ರೋಗ ಇದೆ. ಇವರಲ್ಲಿ 88,441 ಮಂದಿ ರೋಗದಿಂದ ಮುಕ್ತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ರೋಗ ಮೊದಲು ಹರಡಿದ ಚೀನಕ್ಕಿಂತಲೂ ವೇಗದಲ್ಲಿ ಈಗ ಯುರೋಪಿನ ದೇಶಗಳಲ್ಲಿ ರೋಗ ಹೆಚ್ಚು ವ್ಯಾಪಿಸುತ್ತಿದೆ. ಇಟಲಿಯ ಸಾವಿನ ಸಂಖ್ಯೆ ಚೀನಕ್ಕಿಂತಲೂ ಹೆಚ್ಚಾಗಿದೆ. ಚೀನದಲ್ಲಿ ಇದುವರೆಗೆ 3248 ಮಂದಿ ಮೃತಪಟ್ಟಿದ್ದಾರೆ. ಇಟಲಿಯಲ್ಲಿ ಕಡಿಮೆ ದಿವಸಗಳಲ್ಲಿ 3405 ಮಂದಿ ಮೃತಪಟ್ಟಿದ್ದಾರೆ. ಇಲ್ಲಿ 41,035 ಮಂದಿಗೆ ಕೊರೊನಾ ಇದೆ.
ಇನ್ನು ಸ್ಪೈನ್ನಲ್ಲಿ ಹೆಚ್ಚು ರೋಗ ವ್ಯಾಪಿಸಿದೆ. ಇಲ್ಲಿ 831 ಮಂದಿ ಇದುವರೆಗೆ ಮೃತಪಟ್ಟಿರುವರು. 18,077 ಮಂದಿಗೆ ರೋಗ ದೃಢೀಕರಣವಾಗಿದೆ. ಈ ದೇಶಗಳಲ್ಲದೆ ಜರ್ಮನಿ, ಅಮೆರಿಕ, ಫ್ರಾನ್ಸ್ , ದಕ್ಷಿಣ ಕೊರಿಯ, ಸ್ವಿಟ್ಝರ್ಲೆಂಡ್ಸ್, ಇಂಗ್ಲೆಂಡ್ಗಳಲ್ಲಿ ಹೊಸದಾಗಿ ಹೆಚ್ಚು ಮಂದಿಯಲ್ಲಿ ವೈರಸ್ ಹಾವಳಿ ಕಂಡು ಬಂದಿದೆ.












