ತಮಿಳ್ನಾಡಿನಲ್ಲಿ ಪೊಲೀಸರು ವಾಹನ ತಡೆದು ವಾಪಸು ಕಳುಹಿಸುತ್ತಿದ್ದಾರೆ

0
753

ಸನ್ಮಾರ್ಗ ವಾರ್ತೆ

ನಾಡುಕ್ಕಾಣಿ, ಮಾ .20: ಕೊರೊನಾ ಮುನ್ನೆಚ್ಚರಿಕೆಯ ಅಂಗವಾಗಿ ತಮಿಳ್ನಾಡು ಪೊಲೀಸರು ವಾಹನಗಳನ್ನು ತಡೆದು ವಾಪಸು ಕಳುಹಿಸುತ್ತಿದ್ದಾರೆ. ಇದು ನಾಡು ಕಾಣಿ ಎಂಬಲ್ಲಿ ನಡೆದ ಘಟನೆಯಾಗಿದ್ದು ಶುಕ್ರವಾರ ಬೆಳಗ್ಗೆ ಎಂಟು ಗಂಟೆಗೆ ನಾಡುಕಾಣಿ ಗಡಿಯಲ್ಲಿ ಪೊಲೀಸರು ಚೆಕ್‍ಪೋಸ್ಟ್ ನಲ್ಲಿ ವಾಹನ ತಡೆಯಲು ಆರಂಭಿಸಿದ್ದಾರೆ. ಬೈಕ್ ಸವಾರರನ್ನೂ ಹೋಗಲು ಬಿಡುತ್ತಿಲ್ಲ. ಇದೇವೇಳೆ ಕೆಎಸ್ಸಾರ್ಟಿಸಿ ಬಸ್‍ಗಳನ್ನು ಬಿಟ್ಟು ಕಳುಹಿಸಲಾಗುತ್ತಿದೆ. ಜಿಲ್ಲಾಡಳಿತ ನಿರ್ದೇಶನದಂತೆ ಪೊಲೀಸರು ರೆವೆನ್ಯೂ ಹೈವೆ ವಿಭಾಗ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇದೇವೇಳೆ, ತಮಿಳ್ನಾಡು ನೋಂದಣಿ ವಾಹನಗಳಿಗೆ ಹೋಗಲು ಬಿಡುತ್ತಿದ್ದಾರೆ. ಅತ್ಯಗತ್ಯ ಪ್ರಯಾಣಿಕರೆಂದು ಮನವರಿಕೆಯಾದರೆ ಮಾತ್ರ ಮುಂದೆ ಸಾಗಲು ಅನುವು ಮಾಡಿಕೊಡಲಾಗುತ್ತದೆ ಎಂದು ಎಸ್ಸೈ ಪ್ರಭಾಕರನ್ ತಿಳಿಸಿದರು.