ಸನ್ಮಾರ್ಗ ವಾರ್ತೆ
ಮಂಗಳೂರು; ಮಾ. 21- ಇಲ್ಲಿನ ಸ್ಟೇಟ್ ಬ್ಯಾ೦ಕ್ ಬಳಿಯ ನೆಲ್ಲಿಕಾಯಿ ರಸ್ತೆ ಪಕ್ಕದಲ್ಲಿರುವ ಇಬ್ರಾಹೀಮ್ ಖಲೀಲ್ ಮಸೀದಿಯನ್ನು ಇಂದಿನಿಂದ ( ಮಾರ್ಚ್ 21) ಮುಚ್ಚಲಾಗಿದ್ದು, ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಆಡಳಿತ ಸಮಿತಿ ಪ್ರಕಟಣೆ ಹೊರಡಿಸಿದೆ.
ಈ ಮಸೀದಿಯು ನಗರದ ಕೇಂದ್ರ ಭಾಗದಲ್ಲಿರುವುದರಿಂದ ರಾಜ್ಯದ ವಿವಿಧ ಭಾಗಗಳಿಂದ ನಮಾಜ್ ಗಾಗಿ ಮಸೀದಿಗೆ ಬರುತ್ತಾರೆ. ಆದರೆ, ಕೊರೋನಾ ಭೀತಿಯು ಸಾರ್ವತ್ರಿಕವಾಗಿರುವುದರಿಂದ ಮುಂಜಾಗೃತಾ ಕ್ರಮವಾಗಿ ಅನಿರ್ಧಿಷ್ಠಾವಧಿಗೆ ಮಸೀದಿಯನ್ನು ಬಂದ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಮುಂದಿನ ಪ್ರಕಟಣೆ ಹೊರಡಿಸುವವರೆಗೆ ಈ ಬಂದ್ ಅಸ್ತಿತ್ವದಲ್ಲಿರುತ್ತದೆ.
ಕೊರೋನಾ ಕಾರಣಕ್ಕಾಗಿ ಬಂದ್ ಆದ ಮೊದಲ ಮಸೀದಿ ಇಬ್ರಾಹೀಮ್ ಖಲೀಲ್ ಆಗಿದ್ದು, ಮುಂದೆ ಈ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಇದೇವೇಳೆ, ವಿವಿಧ ಮಸೀದಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸ್ವಚ್ಛತೆಗೆ ಆದ್ಯತೆ ನೀಡುತ್ತಿದೆ. ಶುಕ್ರವಾರದ ಪ್ರವಚನ ಮತ್ತು ನಮಾಝನ್ನು ಹೆಚ್ಚಿನ ಮಸೀದಿಗಳು ಚುಟುಕಾಗಿ ನಿರ್ವಹಿಸಿವೆ.












