ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮಾ. 21: ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದ್ದವರಲ್ಲಿ ಎಂಟು ಮಂದಿಗೆ ಕೊರೊನಾ ಇದೆ ಎಂದು ದೃಢಪಟ್ಟಿದ್ದು ಇವರು ಮಾರ್ಚ್ 13ರಿಂದ ದಿಲ್ಲಿಯಿಂದ ತೆಲಂಗಾಣಕ್ಕೆ ಪ್ರಯಾಣಿಸಿದ್ದರು ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಅತ್ಯವಶ್ಯಕ ಅಲ್ಲದ ಪ್ರಯಾಣಗಳನ್ನು ನಿಲ್ಲಿಸಬೇಕೆಂದು ರೈಲ್ವೆ ಸಚಿವಾಲಯ ತಿಳಿಸಿದೆ. ದೇಶದಾದ್ಯಂತ ರೈಲ್ವೆ ನಿಲ್ದಾಣಗಳಲ್ಲಿ ಅಧಿಕಾರಿಗಳು ತಪಾಸಣಾ ವ್ಯವಸ್ಥೆ ಮಾಡಿದ್ದಾರೆ.
ಇದೇವೇಳೆ ನಿನ್ನೆ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೊರೇಶನ್ ಮಾರ್ಚ್ 22ರಿಂದ ಟ್ರೈನ್ಗಳಲ್ಲಿ ಕ್ಯಾಟರಿಂಗ್ ನಿಲ್ಲಿಸಲಾಗುವುದು ಎಂದು ಘೋಷಿಸಿದೆ. ಅದರ ಅಧೀನದ ಫುಡ್ ಪ್ಲಾಕ್, ರಿಫ್ರೆಶ್ಮೆಂಟ್ ರೂಮ್ಗಳು ಮುಂದಿನ ಸೂಚನೆಯವರೆಗೆ ಮುಚ್ಚಲಾಗುವುದು ಎಂದು ತಿಳಿಸಿದೆ.












