ಕೊರೊನಾ 292 ಮಂದಿಗೆ: ಆತಂಕದಲ್ಲಿ ದೇಶ

0
834

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ. 21: ಭಾರತದಲ್ಲಿ ಕೊರೊನಾ ಇರುವವರ ಸಂಖ್ಯೆ 292ಕ್ಕೆ ತಲುಪಿದ್ದು ಈವರೆಗೆ 22 ರಾಜ್ಯಗಳಲ್ಲಿ ಕೊರೊನಾ ಇರುವುದು ಗೊತ್ತಾಗಿದೆ. ಇವರಲ್ಲಿ 39 ಮಂದಿ ವಿದೇಶೀಯರೂ ಸೇರಿದ್ದಾರೆ. ಹಿಂದೆ ಪಂಜಾಬ್, ಮಹಾರಾಷ್ಟ್ರ, ದಿಲ್ಲಿ, ಕರ್ನಾಟಕದಲ್ಲಿ ಒಬ್ಬೊಬ್ಬರು ಮೃತಪಟ್ಟಿದ್ದರು. ಮಹಾರಾಷ್ಟ್ರದಲ್ಲಿ ಇಂದು ಹನ್ನೊಂದು ಕೊರೊನಾ ಕೇಸುಗಳು ದೃಢಪಟ್ಟಿದೆ. ಅಲ್ಲಿ ಕೊರೊನಾ ಪೀಡಿತರ ಸಂಖ್ಯೆ 63 ಆಗಿದೆ. ಗುಜರಾತಿನಲ್ಲಿ 13, ಕರ್ನಾಟಕದಲ್ಲಿ 19, ಲಡಾಕ್ ನಲ್ಲಿ 13, ಉತ್ತರ ಪ್ರದೇಶದಲ್ಲಿ 24, ದಿಲ್ಲಿಯಲ್ಲಿ 26, ತೆಲಂಗಾಣದಲ್ಲಿ 19, ಹರಿಯಾಣದಲ್ಲಿ 17 ಮಂದಿಗೆ ಕೊರೊನಾ ಬಾಧಿಸಿದೆ.

ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಹೆಚ್ಚಳವಾದ ದಿಲ್ಲಿ ಸಹಿತ ವಿವಿಧ ರಾಜ್ಯಗಳಲ್ಲಿ ಕಠಿಣ ನಿಯಂತ್ರಣ ವಿಧಿಸಲಾಗಿದೆ. ಜನರು ಗುಂಪು ಸೇರದಂತೆ, ಶಾಲಾ ಕಾಲೇಜುಗಳು, ಥಿಯೇಟರ್, ಮಾಲ್‍ಗಳು ಪಾರ್ಕುಗಳ ಸಹಿತ ಸಾರ್ವಜನಿಕ ಸ್ಥಳಗಳನ್ನು ಮುಚ್ಚಿಡಲು ಸೂಚನೆ ನೀಡಲಾಗಿದೆ. ರಾಜಸ್ಥಾನದಲ್ಲಿ ಐವರಿಗೆ ಹೊಸದಾಗಿ ಕೊರೊನಾ ವರದಿಯಾಗಿದೆ. ಬಿಲ್‍ವಾರದ ಆಸ್ಪತೆಯ ವೈದ್ಯರಿಗೂ ಅಲ್ಲಿನ ಇತರ ಸಿಬ್ಬಂದಿಗಳಿಗೂ ರೋಗ ದೃಢೀಕರಣವಾಗಿದೆ. ರಾಜಸ್ಥಾನದಲ್ಲಿ 23 ಮಂದಿಗೆ ಕೊರೊನಾ ವರದಿಯಾಗಿದೆ. ಪಂಜಾಬ್‍ನಲ್ಲಿ ಹೊಸದಾಗಿ ಒಬ್ಬನಿಗೆ ರೋಗ ದೃಢೀಕರಣವಾಗಿದೆ. ಗುಜರಾತಿನ ವಡೋದರಲ್ಲಿ 52 ವರ್ಷದ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ. ಶ್ರೀಲಂಕಾದಿಂದ ಇವರು ಮರಳಿ ಬಂದಿದ್ದರು.