ಸನ್ಮಾರ್ಗ ವಾರ್ತೆ
ನವದೆಹಲಿ; ಮಾ. 25- ಸಾರ್ವಜನಿಕ ಹಿತರಕ್ಷಣಾ ಕಾಯ್ದೆ (ಪಿಎಸ್ ಎ) ಅಡಿಯಲ್ಲಿ ಕಳೆದ ವರ್ಷದ ಆಗಸ್ಟ್ 5ರಂದು ಬಂಧನಕ್ಕೀಡಾಗಿದ್ದ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರನ್ನು ಬಿಡುಗಡೆಗೊಳಿಸಲಾಗಿದೆ. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಉಮರ್ ಅಬ್ದುಲ್ಲಾ ಅವರನ್ನು ಬಂಧಿಸಲಾಗಿತ್ತು. ಮಾತ್ರವಲ್ಲ ಅವರ ಬಂಧನದ ಅವಧಿಯನ್ನು ವಿಸ್ತರಿಸುವುದಕ್ಕಾಗಿ ಅವರ ಮೇಲೆ ಪಿಎಸ್ ಎ ಕಾಯ್ದೆಯನ್ನು ಪ್ರಯೋಗಿ ಸಲಾಗಿತ್ತು. ಇದೇ ಮಾರ್ಚ್ 10ರಂದು ಅವರು 50ನೇ ವರ್ಷಕ್ಕೆ ಕಾಲಿರಿಸಿದರು. ಬರೋಬ್ಬರಿ ಎಂಟು ತಿಂಗಳನ್ನು ಗೃಹಬಂಧನದಲ್ಲಿ ಕಳೆದ ಬಳಿಕ ಅವರ ಬಿಡುಗಡೆಯಾದಂತೆ ಆಗಿದೆ.
ಅವರ ತಂದೆ ಫಾರೂಕ್ ಅಬ್ದುಲ್ಲಾ ಅವರನ್ನು ಇತ್ತೀಚಿಗೆ ಬಿಡುಗಡೆಗೊಳಿಸಲಾಗಿತ್ತು












