ಸನ್ಮಾರ್ಗ ವಾರ್ತೆ
ನ್ಯೂಯಾರ್ಕ್, ಮಾ. 25: ಜಗತ್ತಿನಲ್ಲಿ ಕೊರೊನಾ ಪೀಡಿತರಾಗಿ ಮೃತಪಟ್ಟಿರುವವರ ಸಂಖ್ಯೆ 18,907ಕ್ಕೆ ತಲುಪಿದ್ದು 4,22.945 ಮಂದಿಯಲ್ಲಿ ವೈರಸ್ ಇರುವುದು ದೃಢಪಟ್ಟಿದೆ. ಅತ್ಯಂತ ಹೆಚ್ಚು ಕೊರೊನಾ ಸಾವು ಇಟಲಿಯಿಂದ ವರದಿಯಾಗಿದೆ. ಮಂಗಳವಾರ ಇಟಲಿಯಲ್ಲಿ 743 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಮೃತರ ಸಂಖ್ಯೆ ಅಲ್ಲಿ 6,820ಕ್ಕೆ ತಲುಪಿದೆ. ಚೀನದಲ್ಲಿ ಸಾವು 3, 281 ಆಗಿದೆ.
ಚೀನ, ಇಟಲಿಯ ನಂತರ ಅತಿಹೆಚ್ಚು ರೋಗಪೀಡಿತರು ಅಮೆರಿಕದಲ್ಲಿದ್ದಾರೆ. ಇಲ್ಲಿ 54,867 ಮಂದಿಗೆ ರೋಗ ದೃಢಪಟ್ಟಿದೆ. ಕೊರೊನಾ ವೈರಸ್ನ ಮುಂದಿನ ಆಘಾತ ಕೇಂದ್ರ ಅಮೆರಿಕ ಎಂದು ವಿಶ್ವ ಆರೋಗ್ಯ ಸಂಘಟನೆ ಮುನ್ನೆಚ್ಚರಿಕೆ ನೀಡಿದೆ. ಅಮೆರಿಕದಲ್ಲಿ ಇದುವರೆಗೆ 775 ಮಂದಿ ಮೃತಪಟ್ಟಿದ್ದಾರೆ. ಅಮೆರಿಕದ ಹೆಚ್ಚಿನೆಲ್ಲ ರಾಜ್ಯಗಳನ್ನು ಎರಡು ವಾರಗಳ ಮಟ್ಟಿಗೆ ಬಂದ್ ಮಾಡಲಾಗಿದೆ. ಮಂಗಳವಾರ 163 ಮಂದಿ ಮೃತಪಟ್ಟಿದ್ದರು. ಕಳೆದ 24 ಗಂಟೆಗಳಲ್ಲಿ ವರದಿಯಾದ ಹೊಸ ಕೊರೊನಾ ಪ್ರಕರಣಗಳಲ್ಲಿ ಯುರೋಪಿನಿಂದ ಶೇ. 85 ರಷ್ಟು ವರದಿಯಾಗಿದೆ. ಇದು ಅಮೆರಿಕದ ಆರ್ಥಿಕ ಕ್ಷೇತ್ರ ಚೇತರಿಸದಂತಹ ಹೊಡೆತವಾಗಿದೆ ಎಂದು ವರದಿಗಳು ತಿಳಿಸಿವೆ. ಭಾರತದಲ್ಲಿ 21 ದಿವಸಗಳಿಗೆ ಎಲ್ಲ ಮುಚ್ಚಿಡುವಂತೆ ಸರಕಾರದಿಂದ ಘೋಷಣೆಯಾಗಿದ್ದು, ವಿಶ್ವ ಜನಸಂಖ್ಯೆಯಲ್ಲಿ ಮೂರರಲ್ಲೊಂದು ಜನರು ಕೊರೊನಾ ಸಂಬಂಧಿಸಿದ ನಿಯಂತ್ರಣಗಳ ಅಧೀನದಲ್ಲಿದ್ದಾರೆ.












