ಸನ್ಮಾರ್ಗ ವಾರ್ತೆ
ಜಿನೀವಾ, ಮಾ. 26: ಇಟಲಿಯ ಬೆನ್ನಿಗೆ ಕೊರೊನಾ ಸ್ಪೈನ್ನಲ್ಲಿ ಮಾಡಿದ ದಾಂಧಲೆ ಆಘಾತಕಾರಿಯಾಗಿದೆ. ಸ್ಪೈನ್ ಸಾವಿನ ಲೆಕ್ಕದಲ್ಲಿ ಚೀನವನ್ನೂ ಹಿಂದಿಕ್ಕಿದೆ. ಇದುವರೆಗೆ ಅಲ್ಲಿ 3, 647 ಮಂದಿ ಮೃಪಟ್ಟಿದ್ದರೆ ಚೀನದಲ್ಲಿ 3287 ಮೃತಪಟ್ಟಿದ್ದರು. ಕಳೆದ 24 ಗಂಟೆಗಳಲ್ಲಿ ಚೀನದಲ್ಲಿ ಆರು ಮಂದಿ ಮೃತಪಟ್ಟಿದ್ದರೆ ಸ್ಪೈನ್ನಲ್ಲಿ 656 ಮಂದಿ ಮೃತಪಟ್ಟರು. ಇಟಲಿಯು ಸಾವಿನ ಸಂಖ್ಯೆಯಲ್ಲಿ ಮುಂದಿದೆ. ನಿನ್ನೆ 683 ಮಂದಿ ಮೃತಪಟ್ಟಿದ್ದು ಒಟ್ಟು ಅಲ್ಲಿ 7503 ಮಂದಿ ಈವರೆಗೆ ಮೃತಪಟ್ಟಿದ್ದಾರೆ.
ಚೀನ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಮುಂದಿದೆ. ಆದರೆ ಹೊಸದಾಗಿ ಅಲ್ಲಿ ರೋಗ ದೃಢಪಟ್ಟವರ ಸಂಖ್ಯೆ ತುಂಬ ಕಡಿಮೆಯಿದೆ. ನಿನ್ನೆ 67 ಮಂದಿಗೆ ಮಾತ್ರ ಅಲ್ಲಿ ಸೋಂಕು ಕಂಡು ಬಂದಿದೆ. ಆದರೆ ಅಮೆರಿಕದ ಸ್ಥಿತಿ ಭಯಾನಕವಾಗಿದೆ. ನಿನ್ನೆ ಅಮೆರಿಕದಲ್ಲಿ 11,192 ಮಂದಿಗೆ ಕೊರೊನಾ ದೃಢಪಟ್ಟಿದೆ. ಸ್ಪೈನ್ನಲ್ಲಿ 7,45೦, ಇಟಲಿಯಲ್ಲಿ 5,210, ಜರ್ಮನಿಯಲ್ಲಿ 4332, ಫ್ರಾನ್ಸಿನಲ್ಲಿ 2929 ಮಂದಿಗೆ ಕೊರೊನ ದೃಢಪಟ್ಟಿದೆ.












