ಸನ್ಮಾರ್ಗ ವಾರ್ತೆ
ಕೋಲ್ಕತ್ತಾ; ಮಾ. 27- ಕೊರೋನಾವನ್ನು ತಡೆಗಟ್ಟುವುದಕ್ಕಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂಬ ಬಗ್ಗೆ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೊಲ್ಕತ್ತಾದ ಮಾರುಕಟ್ಟೆಗೆ ಪ್ರವೇಶಿಸಿ ವೃತ್ತ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.
ಸುಮಾರು ಒಂದು ಮೀಟರ್ ಅಂತರದಲ್ಲಿ ವೃತ್ತವನ್ನು ಮಾರುಕಟ್ಟೆಯ ಎದುರುಗಡೆ ಎಳೆದ ಮಮತಾ ಬ್ಯಾನರ್ಜಿಯವರು ವ್ಯಾಪಾರಿಗಳಲ್ಲಿ ಅಂತರವನ್ನು ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ.
ಅಲ್ಲದೆ ಜನರು ನೂಕುನುಗ್ಗಾಟವನ್ನು ತಪ್ಪಿಸುವುದಕ್ಕಾಗಿ ಎಲ್ಲಾ ಮಾರುಕಟ್ಟೆಗಳು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತೆರೆದಿರುತ್ತದೆ ಎಂದು ಕೂಡ ಅವರು ಆಶ್ವಾಸನೆ ನೀಡಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
No words… pic.twitter.com/zqejgnntvk
— Citizen Derek | নাগরিক ডেরেক (@derekobrienmp) March 26, 2020












