10 ಲಕ್ಪ ಪ್ಯಾಕೆಟ್ ಗಳು ಮನೆ ಬಾಗಿಲಿಗೆ : ಪಂಜಾಬ್ ಮುಖ್ಯಮಂತ್ರಿ

0
921

ಸನ್ಮಾರ್ಗ ವಾರ್ತೆ

ಚಂಡೀಗಢ, ಮಾ. 27: ದಿನಗೂಲಿಗಳಿಗೆ, ಅಸಂಘಟಿತ ವಲಯದ ಕಾರ್ಮಿಕರಿಗೆ ೧೦ ಲಕ್ಷ ರೇಷನ್ ಪ್ಯಾಕೆಟ್ ಗಳನ್ನು ವಿತರಿಸುವುದಾಗಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ. ಜೋಪಡಾ ಪಟ್ಟಿ ಸಹಿತ ಬಡವರಿರುವಲ್ಲಿಗೆ ಅವರ ಮನೆಗಳಿಗೆ ರೇಷನ್ ಪೊಟ್ಟಣವನ್ನು ಪಂಜಾಬ್ ಸರಕಾರ ತಲುಪಿಸಲಿದೆ.

ವಿತರಣೆ ಆಗದಿರುವವರು ಸಂಪರ್ಕಿಸಲು ಫೋನ್ ನಂಬರನ್ನು ಮುಖ್ಯಮಂತ್ರಿ ಕೊಟ್ಟಿದ್ದಾರೆ. ಡೆಪ್ಯೂಟಿ ಕಮಿಷನರ್ ಕಚೇರಿಗಳಲ್ಲಿ ರೇಷನ್ ಪ್ಯಾಕೆಟ್ ಗಳನ್ನು ತೆಗೆದಿರಿಸಲಾಗುವುದು. ಹತ್ತು ಕಿಲೋ ಅಟ್ಟ, ಎರಡು ಕಿಲೋ ಬೇಳೆ, ಎರಡು ಕಿಲೋ ಸಕ್ಕರೆ ರೇಷನ್ ಪೊಟ್ಟಣ ದಲ್ಲಿದೆ.
ಕೇಂದ್ರ ಘೋಷಿತ ಪ್ಯಾಕೇಜ್ ನಲ್ಲಿ ದಿನಗೂಲಿಗಳಿಗೆ ಅಸಂಘಟಿತ ಕಾರ್ಮಿಕರನ್ನು ಸೇರಿಸದಿರುವುದು ದುರದ್ರಷ್ಟಕರ. ಅವರೇ ದೇಶದಲ್ಲಿ ಹೆಚ್ಚು ಕಷ್ಟ ಅನುಭವಿಸುವರು ಆಗಿದ್ದು ದೇಶದ ಇಂದಿನ ನಿಯಂತ್ರಣಗಳು ಹೆಚ್ಚು ಇವರನ್ನೇ ಬಾಧಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಈ ಹಿಂದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪಾರ್ಟಿಯ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ನಲ್ಲಿ ಪ್ರಜೆಗಳ ಮನೆಬಾಗಿಲಿಗೆ ಪಡಿತರ ತಲುಪಿಸಲು ಅಗ್ರಹಿಸಿದ್ದರು. ಆಹಾರ, ಮೆಡಿಕಲ್ ವಸ್ತುಗಳು ಮುಂತಾದವುಗಳ ವಿತರಣೆ ಖಚಿತ ಪಡಿಸಲಾಗುವುದು ಎಂದರು