ಕೊರೋನಾ ಸೋಂಕು: ಅಮೇರಿಕ ಮೊದಲು, ಬೇರೆ ಬೇರೆ ರಾಷ್ಟ್ರಗಳ ಒಟ್ಟು ವಿವರಗಳು ಇಲ್ಲಿವೆ

0
1448

ಸನ್ಮಾರ್ಗ ವಾರ್ತೆ

ನವದೆಹಲಿ, ಮಾರ್ಚ್ 29 – ಕೊರೋನಾಕ್ಕೆ ಸಂಬಂಧಿಸಿದಂತೆ ಜಾಗತಿಕವಾಗಿ ಹೋರಾಟಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಒಟ್ಟು ಜಗತ್ತಿನ ಪರಿಸ್ಥಿತಿ ಹೇಗಿದೆ ಎಂಬುದರ ವಿವರ ಇಲ್ಲಿದೆ.

1. ಇಟಲಿಯಲ್ಲಿ ಒಟ್ಟು ಸಾವಿನ ಸಂಖ್ಯೆ 9000 ಮೀರಿದ್ದು, ಸೋಂಕು ಬಾಧಿತರ ಸಂಖ್ಯೆ 86 ಸಾವಿರಕ್ಕಿಂತಲೂ ಹೆಚ್ಚು.

2. ಇರಾನಿನಲ್ಲಿ ಕೊರೋನಾದಿಂದಾಗಿ ಸಾವಿಗೀಡಾದವರ ಸಂಖ್ಯೆ 2500.

3. ಚೀನಾದಲ್ಲಿ 54 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಮೃತರ ಸಂಖ್ಯೆ 3295.

4. ಜರ್ಮನಿಯಲ್ಲಿ ಕೊರೋನಾ ಬಾಧಿತರ ಸಂಖ್ಯೆ 53,000, ಸಾವು 325.

5. ಸ್ಪೈನ್ ನಲ್ಲಿ 9444 ವೈದ್ಯರು ಮತ್ತು ದಾದಿಯರಿಗೆ ಸೋಂಕು ತಗುಲಿದೆ. ಸಾವಿಗೀಡಾದವರ ಸಂಖ್ಯೆ 5812

6. ಅಮೆರಿಕದಲ್ಲಿ ಸೋಂಕು ಬಾಧಿತರ ಸಂಖ್ಯೆ 112560. 1800 ಮಂದಿ ಮೃತರಾಗಿದ್ದಾರೆ. ಕೊರೋನಾ ಸೋಂಕಿತರ ಪಟ್ಟಿಯಲ್ಲಿ ಅಮೆರಿಕಾ ಜಾಗತೀಕವಾಗಿಯೇ ಪ್ರಥಮ ಸ್ಥಾನದಲ್ಲಿದೆ.

7. ಆಸ್ಟ್ರೇಲಿಯಾದಲ್ಲಿ 3635 ಮಂದಿಗೆ ಸೋಂಕು ತಗುಲಿದ್ದು, 14 ಮಂದಿ ಸಾವು.

8. ಘಾನಾ ಸಂಪೂರ್ಣ ಲಾಕ್ ಡೌನ್ ಆಗಿದೆ. 137 ಮಂದಿಗೆ ಸೋಂಕು ತಗುಲಿದ್ದು, 4 ಮಂದಿ ಮೃತರಾಗಿದ್ದಾರೆ.

9. ತುರ್ಕಿ ಪ್ರಯಾಣವನ್ನು ನಿಯಂತ್ರಿಸಿದೆ.

10. ಥಾಯ್ಲೆಂಡಿನಲ್ಲಿ ಕೊರೋನಾಕ್ಕೆ ಪ್ರಥಮ ಬಲಿಯಾಗಿದೆ. ಬಾಧಿತರ ಸಂಖ್ಯೆ 1245

11. ಜಪಾನಿನಲ್ಲಿ ಕೊರೋನಾ ಪೀಡಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

12. ಜೋರ್ದಾನ್ ನಲ್ಲಿ ಮೊದಲ ಸಾವು ಸಂಭವಿಸಿದೆ.

13. ಆಫ್ರಿಕಾ, ಏಷ್ಯಾ, ಯುರೋಪ್ ಮುಂತಾದ ಕಡೆ ವಿಶ್ವಸಂಸ್ಥೆಯ ಉದ್ಯೋಗಿಗಳಿಗೂ ಕೊರೋನಾ ಸೋಂಕು ಬಾಧಿಸಿದೆ.

14. ಮೆಕ್ಸಿಕೋದಲ್ಲಿ ಸೋಂಕು ಬಾಧಿತರ ಸಂಖ್ಯೆ 717. 12 ಮಂದಿ ಮೃತರಾಗಿದ್ದಾರೆ.

15. ದಕ್ಷಿಣ ಕೊರಿಯಾದಲ್ಲಿ 146 ಹೊಸ ಪ್ರಕರಣಗಳು ದಾಖಲಾಗಿವೆ.