ಶಿಕಾರಿಪುರ: ಪೊಲೀಸರ ಥಳಿತದಿಂದಲೇ ಸಾವು; ಲಕ್ಷ್ಮಣ್ ಕುಟುಂಬದ ಆರೋಪ

0
1412

ಸನ್ಮಾರ್ಗ ವಾರ್ತೆ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬೀದರ್ ಕೊಪ್ಪ ಗ್ರಾಮದ ಲಕ್ಷ್ಮಣ್ ನಾಯಕ್ ಎಂಬವರು ಸಾವಿಗೀಡಾಗಿದ್ದು, ಪೊಲೀಸರು ಥಳಿಸಿರುವುದೇ ಇದಕ್ಕೆ ಕಾರಣ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕ್ಷೇತ್ರದಲ್ಲೇ ಈ ಘಟನೆ ನಡೆದಿರುವುದು ತೀವ್ರ ಗಮನ ಸೆಳೆದಿದ್ದು, ಪೋಸ್ಟ್ ಮಾರ್ಟಮ್ ವರದಿಗಾಗಿ ಕಾಯಲಾಗುತ್ತಿದೆ. ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಪೊಲೀಸ್ ಥಳಿತದ ಕುರಿತಂತೆ ವ್ಯಾಪಕ ದೂರುಗಳು ಬರುತ್ತಿರುವುದರ ನಡುವೆಯೇ ಈ ಘಟನೆ ನಡೆದಿರುವುದು ಚರ್ಚೆಗೆ ಕಾರಣವಾಗಿದೆ.

ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಈ ಸಂದರ್ಭದಲ್ಲಿ ಲಕ್ಷ್ಮಣ್ ನಾಯಕ್ ಅವರ ಮಗ ಜೊತೆ ಇದ್ದರು ಎಂದು ಕುಟುಂಬ ಹೇಳಿದೆ. ವಿವರಗಳು ಇನ್ನಷ್ಟೇ ಬರಬೇಕಾಗಿದ್ದು, ಈ ಕುರಿತಂತೆ ವೀಡಿಯೊ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.