ಲಾಕ್‍ಡೌನ್ ವಿಸ್ತರಣೆಗೆ ಚಿಂತಿಸಿಲ್ಲ- ಕೇಂದ್ರ; ಸಾವಿರ ಗಡಿದಾಟಿದ ಕೊರೋನಾ ಸೋಂಕಿತರ ಸಂಖ್ಯೆ

0
671

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ.3: ಕೊರೊನಾ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಘೋಷಿಸಿದ ಲಾಕ್‍ಡೌನನ್ನು ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಿಲ್ಲ ಎಂದು ಅದು ತಿಳಿಸಿದ್ದು ದೇಶದಲ್ಲಿ ಎಪ್ರಿಲ್ 14ರವರೆಗೆ ಲಾಕ್‍ಡೌನ್ ಇದೆ. ಈಗಾಗಲೇ ತೆಲಂಗಾಣ ಎಪ್ರಿಲ್ ಏಳರಂದು ರಾಜ್ಯ ಕೊರೊನ ಮುಕ್ತ ಆಗಲಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಘೋಷಿಸಿದ್ದಾರೆ. ಹೊಸ ಪ್ರಕರಣಗಳು ವರದಿಯಾಗದಿದ್ದರೆ ತೆಲಂಗಾಣವನ್ನು ಕೊರೊನ ರೋಗ ಮುಕ್ತ ಎಂದು ಘೋಷಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಈ ಎಲ್ಲ ಬೆಳವಣಿಗೆಯಿದ್ದು ಕೇಂದ್ರ ಸರಕಾರದ ವತಿಯಿಂದ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಚೌಬೆ ಲಾಕ್ ಡೌನ್ ಮುಂದುವರಿಸದಿರುವ ವಿವರವನ್ನು ಮಾಧ್ಯಮಗಳಿಗೆ ತಿಳಿಸಿದರು.

ಇದೇವೇಳೆ ದೇಶದಲ್ಲಿ ಕೊರೊನಾ ಇರುವವರು 1000ಕ್ಕೂ ಹೆಚ್ಚು ಮಂದಿ ಇದ್ದಾರೆ ಎಂದು ಆರೋಗ್ಯ ಮಂತ್ರಾಲಯ ತಿಳಿಸಿದೆ. ಆದಿತ್ಯವಾರದ ಲೆಕ್ಕ ಪ್ರಕಾರ 1024 ಮಂದಿಗೆ ರೋಗ ದೃಢಪಟ್ಟಿದೆ. 29 ಮಂದಿ ಕೊರೊನದಿಂದ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಯಲ್ಲಿ 201 ಮಂದಿಗೆ ಕೊರೊನಾ ತಗಲಿದ್ದು ದೃಢಗೊಂಡಿದೆ ಎಂದು ಆರೋಗ್ಯ ಸಚಿವಾಲಯದ ವರದಿ ವಿವರಿಸಿದೆ.

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪುಟವನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.