ಕೊರೋನಾ: ರಾಪಿಡ್ ಟೆಸ್ಟ್ ನಿಂದ 30 ನಿಮಿಷದಲ್ಲೇ ಫಲಿತಾಂಶ

0
864

ಸನ್ಮಾರ್ಗ ವಾರ್ತೆ

ತಿರುವನಂತಪುರಂ, ಮಾ. 30: ಕೊರೊನ ಹಬ್ಬದಂತೆ ತಡೆಯುವುದಕ್ಕೆ ರಾಪಿಡ್ ಆಂಟಿಬಯೊಡಾಟ ಟೆಸ್ಟಿಗೆ ಪ್ರೊಟೋಕಾಲ್ ಸಿದ್ಧವಾಗಿದೆ. 30 ನಿಮಿಷದಲ್ಲಿ ಪರೀಕ್ಷಾ ಫಲಿತಾಂಶ ಲಭಿಸುವುದು ರಾಪಿಡ್ ಟೆಸ್ಟ್ ನ ವಿಶೇಷತೆ. ಈಗಿನ ಪೊಲಿಮರೈಸ್ ಚೆಯಿನ್ ರಿಯಾಕ್ಸಷನ್ ಟೆಸ್ಟ್(ಪಿಸಿಆರ್)ನಲ್ಲಿ ಸಂಶೋಧನಾ ಚಟುವಟಿಕೆಗಳಿಗೇ ಆರು ಗಂಟೆ ಬೇಕು. ಸ್ಯಾಂಪಲ್ ತೆಗೆಯಲು ಮತ್ತು ಕಳುಹಿಸಲು ಮತ್ತು ಫಲಿತಾಂಶ ಬರಲು ಎರಡು ಮೂರು ದಿವಸ ಬೇಕು. ಪಿಸಿಆರ್ ಗೆ ಹೊಲೀಸಿದರೆ ರಾಪಿಡ್ ಟೆಸ್ಟ್ ನ ವೆಚ್ಚ ಕಡಿಮೆಯಾಗಿದೆ. ಒಂದು ವಾರದ ಮೊದಲು ಕೇರಳ ರಾಪಿಡ್ ಟೆಸ್ಟ್ ಗೆ ಮುಂದಾಗಿದ್ದರೂ ಕಳೆದ ದಿವಸ ಭಾರತದ ಮೆಡಿಕಲ್ ಕೌನ್ಸಿಲಿನ ಅನುಮತಿ ಸಿಕ್ಕಿದೆ.

ವೈರಸ್ ಮನುಷ್ಯ ದೇಹದಲ್ಲಿ ಸೇರಿಕೊಂಡರೆ ಉಂಟಾಗುವ ಆಂಟಿಬೊಡಿಕ್‍ಗಳನ್ನು ಪತ್ತೆಹಚ್ಚುವ ಪರೀಕ್ಷೆಯೇ ರಾಪಿಡ್ ಟೆಸ್ಟ್ ಆಗಿದೆ. ವೈರಸ್ ಶರೀರದ ಒಳಗೆ ಹೋದರೆ ದಿನಗಳೊಳಗೆ ದೇಹದಲ್ಲಿ ಆಂಟಿ ಬೊಡಿಕ್‍ಗಳನ್ನು ನಿರ್ಮಿಸತೊಡಗುವುದು. ಇದು ಎಲ್ಲಿ, ರಕ್ತದಲ್ಲೇ ಎಂದು ರಾಪಿಡ್ ಟೆಸ್ಟ್ ನಲ್ಲಿ ತಿಳಿದುಕೊಳ್ಳಲಾಗುವುದು. ರಕ್ತ ಇತ್ಯಾದಿ ರಾಪಿಡ್ ಟೆಸ್ಟ್ ನಲ್ಲಿ ಪರೀಕ್ಷೆಗೊಳಗಾಗುತ್ತದೆ

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪುಟವನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.