ಸನ್ಮಾರ್ಗ ವಾರ್ತೆ
ಬದಾಯೂನ್, ಎ. 19: ಉತ್ತರಪ್ರದೇಶದ ಬದಾಯೂನ್ ಜಿಲ್ಲೆಯಲ್ಲಿ ಉಚಿತ ರೇಶನ್ಗೆ ಕ್ಯೂ ನಿಂತವರಲ್ಲಿ ಮಹಿಳೆಯೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ಅಂಗಡಿಯ ಮುಂದೆ ಕ್ಯೂ ನಿಂತಿದ್ದ 35 ವರ್ಷದ ಮಹಿಳೆ ಸಾವೀಗೀಡಾಗಿದ್ದು ಹೃದಯಾಘಾತ ಸಾವಿಗೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದರು.
ಇಲ್ಲಿ ಫೋನ್ ನೆಟ್ವರ್ಕ್, ಇಂಟರ್ನೆಟ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆದ್ದರಿಂದ ಪಡಿತರ ವಿತರಣೆ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ಜನರು ರೇಶನ್ನಿಗಾಗಿ ತುಂಬ ಹೊತ್ತು ಕಾಯಬೇಕಾದ ಪರಿಸ್ಥಿತಿ ಇದೆ ಎಂದು ಜಿಲ್ಲಾ ಪಡಿತರ ವಿತರಣಾಧಿಕಾರಿ ತಿಳಿಸಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












