ಕೊರೋನಾ ಗುಣಮುಖ: ಕಾಸರಗೋಡು ಪ್ರಥಮ; ದೇಶಕ್ಕೆ ಮಾದರಿ ಎಂದ ಕೇಂದ್ರ ಸರಕಾರ

0
1808

ಸನ್ಮಾರ್ಗ ವಾರ್ತೆ

ಕಾಸರಗೋಡು, ಎ.19: ಅತ್ಯಂತ ಹೆಚ್ಚು ಕೊರೊನಾ ರೋಗಿಗಳು ಗುಣಮುಖರಾದ ಜಿಲ್ಲೆ ಎಂಬ ಖ್ಯಾತಿ ಕಾಸರಗೋಡಿಗೆ ಸಿಕ್ಕಿದೆ. ಇದುವರೆಗೆ 115 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಒಟ್ಟು ರೋಗಿಗಳಲ್ಲಿ ಶೇ. 88.45ರಷ್ಟು ಮಂದಿ ಗುಣಮುಖರಾಗಿದ್ದು ಇಲ್ಲಿಯವರೆಗೂ ಯಾವುದೇ ಸಾವಿನ ಘಟನೆ ನಡೆದಿಲ್ಲ. ಕೇಂದ್ರ ಸರಕಾರ ಕಾಸರಗೋಡು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿಕೊಂಡಿದೆ.

ಮೊದಲು ಹೆದರಿಕೆ ಸೃಷ್ಟಿಸಿತು: ನಂತರ ಮಾದರಿಯೆನಿಸಿಕೊಂಡಿತು:

ಕೊರೊನಾ ವ್ಯಾಪಿಸುವ ಹೆದರಿಕೆಯನ್ನು ಕಾಸರಗೋಡು ಮೊದಲು ಸೃಷ್ಟಿಸಿಹಾಕಿತ್ತು. ಇಲ್ಲಿ ಪ್ರತಿದಿನ ಆರಂಭದಲ್ಲಿ ಹಲವು ಮಂದಿಗೆ ರೋಗ ದೃಢವಾಗಿತ್ತು. ಆದರೆ, ಸರಿಯಾದ ನಿಯಂತ್ರಣದಿಂದ ಇಲ್ಲಿ ರೋಗ ವ್ಯಾಪಿಸುವುದನ್ನು ತಡೆಹಿಡಿಯಲು ಸಾಧ್ಯವಾಗಿದೆ. ಕೊರೊನ ಹರಡದಿರುವಂತೆ ಕಾಸರಗೋಡಿನಲ್ಲಿ ಕೈಗೊಂಡ ಮುನ್ನೆಚ್ಚರಿಕೆಯ ಕ್ರಮಗಳನ್ನು ದೇಶಾದ್ಯಂತ ಅನುಸರಿಸುವಂತೆ ಕೇಂದ್ರ ಸರಕಾರ ರಾಜ್ಯಗಳಿಗೆ ಸಲಹೆ ನೀಡಿದೆ. ಇಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಶೇ. 15.30 ಅನಿವಾಸಿಗಳಾಗಿ ವಿದೇಶದಲ್ಲಿ ದುಡಿಯುತ್ತಿದ್ದಾರೆ. ಅಲ್ಲಿಂದ ಮರಳಿದವರಿಗೆ ಕೊರೊಂಟೈನ್ ಮಾಡಲಾಗಿತ್ತು.

ಕೇರಳದ ರಾಜಧಾನಿ ಕಾಸರಗೋಡಿಗೆ ತುಂಬ ದೂರದಲ್ಲಿದೆ. ಇಷ್ಟು ದೊಡ್ಡ ಅನಿವಾಸಿ ಸಮುದಾಯವೂ ಇದೆ. ಆದರೂ ಕಾಸರಗೋಡಿನ ಮುಂಜಾಗ್ರತೆಗಳು ಯಶಸ್ವಿಯಾಗಿರುವುದು ಶ್ಲಾಘನಾರ್ಹವಾಗಿದ್ದು ಸರಕಾರ ಕೋವಿಡ್ ಹಾಟ್‍ಸ್ಪಾಟ್ ಆಗಿಬಿಟ್ಟಿದ್ದ ಕಾಸರಗೋಡಿಗೆಂದೇ ವಿಶೇಷ ಅಧಿಕಾರಿಯನ್ನು ಕೂಡ ನೇಮಕಗೊಳಿಸಿತ್ತು. ಜಿಲ್ಲೆಯಲ್ಲಿ 17,373 ಮಂದಿಗೆ ಹೋಂ ಕ್ವಾರಂಟೈನ್ ಇತ್ತು. ಜೊತೆಗೆ ಆರೋಗ್ಯ ಕಾರ್ಯರ್ತರು ಎಲ್ಲ ಮನೆಗೆ ಹೋಗಿ ರೋಗದ ವಿವರವನ್ನು ಸಂಗ್ರಹಿಸಲು ಇದರಿಂದ ಸುಲಭವಾಯಿತು.

ಶನಿವಾರ ಹೊಸ ರೋಗವಿಲ್ಲ:

ಇಬ್ಬರು ಡಿಸ್‍ಚಾರ್ಜು ಆಗಿರುವ ಶನಿವಾರವೂ ಹೊಸದಾಗಿ ಇಲ್ಲಿ ಯಾರಲ್ಲೂ ಕೊರೊನಾ ಕಂಡು ಬಂದಿಲ್ಲ. ಜಿಲ್ಲೆಯಲ್ಲಿ ರೋಗಪೀಡಿತರ ಸಂಖ್ಯೆ 53ಕ್ಕಿಳಿದಿದೆ. ಇವರಲ್ಲಿ 49 ಮಂದಿ ಜಿಲ್ಲೆಯಲ್ಲಿ ಮತ್ತು ನಾಲ್ವರು ಕಣ್ಣೂರು ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಗಳಲ್ಲಿ 5740 ಮತ್ತು ಆಸ್ಪತ್ರೆಯಲ್ಲಿ 117 ಮಂದಿ ನಿರೀಕ್ಷಣೆಯಲ್ಲಿದ್ದಾರೆ. ನಿನ್ನೆ ಹೊಸದಾಗಿ ಹತ್ತು ಮಂದಿಯನ್ನು ಐಸೋಲೇಶನ್ ವಾರ್ಡಿಗೆ ದಾಖಲಿಸಲಾಗಿದೆ. ಕಮ್ಯೂನಿಟಿ ಸಮೀಕ್ಷೆ ಪ್ರಕಾರ 3405 ಮನೆಗಳಿಗೆ ಫೀಲ್ಡ್ ವಿಭಾಗದ ಸಿಬ್ಬಂದಿಗಳು ಭೇಟಿ ನೀಡಿ 34 ಮಂದಿಯ ಸ್ಯಾಂಪಲ್ ಸಂಗ್ರಹಿಸಿದ್ದು ಇದರಲಿ 13 ಮಂದಿ ಪಾಸಿಟಿವ್ ಆಗಿರುವವರ ಸಂಪರ್ಕದಲ್ಲಿದ್ದವರು. 22 ಮಂದಿ ಪಾಸಿಟಿವ್ ಕೇಸುಗಳೊಂದಿಗೆ ಸಂಪರ್ಕ ಇಲ್ಲದವರು. ಕೊರೊಂಟೈನಲ್ಲಿದ್ದ 2044 ಮಂದಿಯ ಕೊರೊಂಟೈನ್ ಅವಧಿ ಮುಗಿದಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.