ಮದ್ದಿಗಾಗಿ 36 ಕಿಲೋಮೀಟರ್ ಸೈಕಲ್ ತುಳಿದ 72 ವರ್ಷದ ವೃದ್ಧ

0
479

ಸನ್ಮಾರ್ಗ ವಾರ್ತೆ

ಫಾಜ್ಲಿಕ, ಎ. 20: ಕೊರೊನಾ ದೆಸೆಯಿಂದ ಲಾಕ್ ಡೌನ್ ಅವಧಿಯನ್ನು ಮೇ.3ರವರೆಗೆ ವಿಸ್ತರಿಸಲಾಗಿದ್ದು ಜನರು ತರತರದ ಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ವಾಹನ ಸಂಚಾರ ಇಲ್ಲದ್ದು ಬಹುದೊಡ್ಡ ಅಡಚಣೆಯಾಗಿದೆ. ಪಂಜಾಬಿನ ಫಾಜ್ಲಿಕಾದಿಂದ 72 ವರ್ಷದ ವಯೋವೃದ್ಧ ವ್ಯಕ್ತಿ ಮದ್ದಿಗಾಗಿ 36 ಕಿಲೋ ಮೀಟರ್ ಸೈಕಲ್ ತುಳಿದು ಮೆಡಿಕಲ್ ಸ್ಟೋರ್ ಗೆ ಬಂದಿದ್ದಾರೆ. ಗುರುದ್ವಾರದಲ್ಲಿ ಕೆಲಸದಲ್ಲಿರುವ ಚಕ್ಕ ಪನ್ನಿವಾಲ ಭೋಡ್‍ಪುರದ ಮುನ್ಶಿರಾಮ್ ಫಂಗಲ್ ಇನ್ಸ್ ಪೆಕ್ಷನ್ ಮದ್ದಿಗಾಗಿ ಇಷ್ಟು ದೂರ ಸೈಕಲ್ ತುಳಿದು ಮೆಡಿಕಲ್ ಶಾಪ್‍ಗೆ ಬಂದರು. ರಾತ್ರೆಯಿಡೀ ತುರಿಕೆಯಿಂದ ಅವರು ಕಷ್ಟಪಟ್ಟಿದ್ದರಿಂದ ಇಂತಹ ಸಾಹಸಕ್ಕೆ ಅವರು ಮುಂದಾದರು.

ಪಂಜಾಬಿನಲ್ಲಿ ಕೊರೊನಾ ಪೀಡಿತರ ಸಂಖ್ಯೆ 244ಕ್ಕೇರಿಕೆಯಾಗಿದೆ. ಹೊಸದಾಗಿ ಜಲಂಧರ್ ಜಿಲ್ಲೆಯಲ್ಲಿ ಆರು ಮಂದಿಗೆ ರೋಗ ದೃಢೀಕರಣವಾಗಿದೆ. ಇವರಲ್ಲಿ ಐದು ಮಂದಿ ಕೊರೊನ ಪಾಸಿಟಿವ್ ಎಂದು ಘೋಷಿಸಿದ ವ್ಯಕ್ತಿಯ ಸಂಪರ್ಕದಲ್ಲಿದ್ದವರು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.