ಅದನ್ನು ಮಕ್ಕಳ ಬರ್ತ್ ಡೇ ಪಾರ್ಟಿಯಲ್ಲಿ ಬಲೂನ್ ಊದಲು ಬಳಸಿಕೊಳ್ಳಿ: ನೀತಿ ಆಯೋಗದ ಮುಖ್ಯಸ್ಥರಿಗೆ ವೈದ್ಯರ ಖಾರ ಪ್ರತಿಕ್ರಿಯೆ

0
1268

ಸನ್ಮಾರ್ಗ ವಾರ್ತೆ

ನೀತಿ ಆಯೋಗದ ಮುಖ್ಯಸ್ಥ ಅಮಿತಾಬ್ ಕಾಂತ್ ಅವರು ವೆಂಟಿಲೇಟರ್ ಗೆ ಸಂಬಂಧಿಸಿ ಮಾಡಿದ ಟ್ವೀಟ್ ಗೆ ಪ್ರಧಾನಿ ಮೋದಿಯವರ ಸಮರ್ಥಕರಾಗಿದ್ದ ಡಾ/ ಜಗದೀಶ ಹಿರೇಮಠ್ ಅವರು ಟ್ವೀಟ್ ಮೂಲಕ ನೀಡಿರುವ ಪ್ರತಿಕ್ರಿಯೆಯು, ಸಾಮಾಜಿಕ ಜಾಲ ತಾಣಗಳಲ್ಲಿ ಸದ್ದು ಮಾಡಿದೆ.

ಅಮಿತಾಬ್ ಕಾಂತ್ ಅವರು, ವೆಂಟಿಲೇಟರ್ ಚಿತ್ರವೊಂದನ್ನು ಹಾಕಿ, ಇದು ಭಾರತೀಯ ಸಂಶೋಧನೆ. ಇದು ವಿಶ್ವದಲ್ಲೇ ಅತೀ ಕಡಿಮೆ ವೆಚ್ಚದ ವೆಂಟಿಲೇಟರ್ ಆಗಿದ್ದು, ಇದನ್ನು ಬೆಂಗಳೂರಿನ ಡೈನಮಾಟಿಕ್ ಟೆಕ್ ತಯಾರಿಸಿದೆ. ಜೀರೋ ವಿದ್ಯುತ್, ನೋ ಇಂಪೋರ್ಟ್ಸ್, ನೋ ಎಲೆಕ್ಟ್ರಾನಿಕ್ ಕಾಂಪೊನೆಂಟ್ಸ್, ಕಂಟ್ರೊಲ್ಡ್ ಬ್ರೀದಿಂಗ್ ರೇಟ್ ಎಂಬಿತ್ಯಾದಿಯಾಗಿ ಅದರ ವಿಶೇಷತೆಗಳನ್ನೂ ಬರೆದಿದ್ದರು.

ಇದನ್ನು ನಾನ್ಸೆನ್ಸ್ ಎಂದು ಖಾರವಾಗಿಯೇ ಖಂಡಿಸಿರುವ ಹಿರೇಮಠ್ ಅವರು, ಇದು ಸಂಶೋಧನೆಯಲ್ಲ. ಅದನ್ನು ನಿಮ್ಮ ಮನೆಯ ಮಕ್ಕಳ ಬರ್ತ್ ಡೇ ಪಾರ್ಟಿಯಲ್ಲಿ ಬಲೂನ್ ಊದಲು ಬಳಸಿಕೊಳ್ಳಿ ಎಂದು ಕಟಕಿಯಾಡಿದ್ದಾರೆ.

ಹಾಗೆಯೇ ಪ್ರಧಾನಿಯವರಿಗೆ ಟಾಗ್ ಮಾಡಿ, ತಾವು ಏನು ಹೇಳುತ್ತಿದ್ದೇವೆ ಎಂಬುದೇ ಗೊತ್ತಿಲ್ಲದ ಮಂದಿಯ ಮಾತನ್ನು ಕೇಳಿಸಿಕೊಳ್ಳಬೇಡಿ ಎಂದು ವಿನಂತಿಸಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.