ಸನ್ಮಾರ್ಗ ವಾರ್ತೆ
ಕೇರಳ, ಮೇ. 20: ದನದ ಕೊರಳಿಗೆ ಕಟ್ಟುವ ಹಗ್ಗಕ್ಕೆ ಸಿಲುಕಿದ ಒಂದೂವರೆ ವರ್ಷದ ಹೆಣ್ಣುಮಗು ದಾರುಣವಾಗಿ ಮೃತಪಟ್ಟಿದೆ . ಪಾರಶ್ಶಾಲ ಮೇಕ್ಕತ್ತಟ್ಟದ ರಾಜೇಶ್ ಶೈನಿ ದಂಪತಿಯ ಪುತ್ರಿ ಸೈರಾ ಮೃತಪಟ್ಟಿರುವ ಮಗು. ರವಿವಾರ ಬೆಳಗೆ 9:30ಕ್ಕೆ ಘಟನೆ ನಡೆದಿದ್ದು ಮನೆಯ ಸಮೀಪದ ಸಂಬಂಧಿಕರ ಮನೆಯ ದನದ ಹಗ್ಗಕ್ಕೆ ಸಿಲುಕಿ ಮಗು ಮೃತಪಟ್ಟಿದೆ..
ಕರುವಿನ ಬಳಿಗೆ ಮಗು ಹೋಗಿತ್ತು. ಈ ವೇಳೆ ದನದ ಹಗ್ಗಕ್ಕೆ ಮಗು ಸಿಕ್ಕಿಹಾಕಿಕೊಂಡಿದೆ. ತಲೆಗೆ ಗಂಭೀರ ಗಾಯವಾಯಿತು. ಕೂಡಲೇ ಮಗುವನ್ನು ಪಾರಶ್ಶಾಲದ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ತಿರುವನಂತಪುರಂ ಮೆಡಿಕಲ್ ಕಾಲೇಜಿಗೆ ಕರೆದುಕೊಂಡು ಹೋದರೂ ಮಗು ಬದುಕಿ ಉಳಿಯಲಿಲ್ಲ. ಮೃತದೇಹವನ್ನು ಪೋಸ್ಟ್ ಮಾರ್ಟಂ ಮಾಡಿ ಸೋಮವಾರ ಕುಟುಂಬಕ್ಕೆ ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












