ಕೊರೊನಾ ಪೀಡಿತರು 24 ಲಕ್ಷ; ಅಮೆರಿಕದಲ್ಲಿ 40,000 ಸಾವು

0
702

ಸನ್ಮಾರ್ಗ ವಾರ್ತೆ

ಬೀಜಿಂಗ್, ಎ. 20: ಜಾಗತಿಕವಾಗಿ ಕೊರೊನಾ ಇರುವವರ ಸಂಖ್ಯೆ 24,07,340ಕ್ಕೆರಿಕೆಯಾಗಿದೆ. 1,65,069 ಮಂದಿ ಮೃತಪಟ್ಟಿದ್ದಾರೆ. 6,25,128 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ಈಗ 16,17,143 ಮಂದಿ ಚಿಕಿತ್ಸೆಯಲ್ಲಿದ್ದಾರೆ. ಕೊರೊನಾ ವೈರಸ್ ಅಮೆರಿಕದಲ್ಲಿ ಭಯಾನಕ ಪರಿಸ್ಥಿತಿಯನ್ನು ಸೃಷ್ಟಿಸಿದ್ದು ಇಲ್ಲಿ 7,64,265 ಮಂದಿಗೆ ಕೊರೊನಾ ದೃಢಪಟ್ಟಿದೆ. 71,012 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. 40,565 ಮಂದಿ ಮೃತಪಟ್ಟಿದ್ದಾರೆ. 6,52,688 ಮಂದಿ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಪೇನ್‍ನಲ್ಲಿ ರೋಗ ಪೀಡಿತರ ಸಂಖ್ಯೆ ಎರಡು ಲಕ್ಷಕ್ಕೆ ನಿಕಟವಾಗಿದೆ. 1,98,674 ಮಂದಿಗೆ ಇಲ್ಲಿ ವೈರಸ್ ತಗಲಿದೆ. 20,453 ಮಂದಿ ಮೃತಪಟ್ಟಿದ್ದಾರೆ. 1,00,864 ಮಂದಿ ಈಗ ಕೊರೊನಾಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರತದಲ್ಲಿ ಕೊರೊನ ಪೀಡಿತರ ಸಂಖ್ಯೆ 17,615ಕ್ಕೇರಿಕೆಯಾಗಿದೆ. ದೇಶದಲ್ಲಿ 14,202 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2, 854 ಮಂದಿ ರೋಗದಿಂದ ಗುಣಮುಖರಾದರು. 559 ಮಂದಿ ಮೃತಪಟ್ಟಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.