ಜಾಗತಿಕ ಪತ್ರಿಕಾ ಸ್ವಾತಂತ್ರ್ಯ: 180 ದೇಶಗಳ ಪಟ್ಟಿಯಲ್ಲಿ ಭಾರತ ಸ್ಥಾನ ಇದು

0
1107

ಸನ್ಮಾರ್ಗ ವಾರ್ತೆ

ಲಂಡನ್, ಎ. 23: ರಿಪೋಟರ್ಸ್ ವಿದೌಟ್ ಬೋರ್ಡರ್ಸ್ ಬಿಡುಗಡೆಗೊಳಿಸಿರುವ ಜಾಗತಿಕ ಪತ್ರಿಕಾ ಸ್ವಾತಂತ್ರ್ಯದ ಪಟ್ಟಿಯಲ್ಲಿ ಭಾರತದ ಸ್ಥಾನ 142ನೇ ಸ್ಥಾನಕ್ಕೆ ಕುಸಿದಿದೆ. ಒಟ್ಟು 180 ದೇಶಗಳು ಪಟ್ಟಿಯಲ್ಲಿವೆ. ನೋರ್ವೇ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಉತ್ತರ ಕೊರಿಯ ಕೊನೆಯ ಸ್ಥಾನದಲ್ಲಿದ್ದರೆ ಅಮೆರಿಕ 45 ನೇ ಸ್ಥಾನದಲ್ಲಿದೆ. ಕಳೆದ ವರ್ಷ ಆಗಸ್ಟ್ ನಲ್ಲಿ ಕೇಂದ್ರ ಸರಕಾರ ಕಾಶ್ಮೀರದ 370 ವಿಧಿ ರದ್ದುಪಡಿಸಿತ್ತು.

ತದನಂತರ ನಡೆದ ಪ್ರತಿಭಟನೆ ಮತ್ತು ಅದರ ವಿರುದ್ಧ ಕಾರ್ಯಾಚರಣೆಗಳು ಹಾಗೂ ಇಂಟರ್ ನೆಟ್ ಸಹಿತ ಮಾಧ್ಯಮಗಳ ನಿಷೇಧ ಭಾರತವನ್ನು ಎರಡು ಸ್ಥಾನ ಕೆಳಗೆ ದಬ್ಬಿದೆ. ತೆರೆದ ಜೈಲು ಎಂಬಂತಾಗಿದ್ದ ಕಾಶ್ಮೀರದ ಬೆಳವಣಿಗೆಗಳ ನಿಜಸ್ಥಿತಿಯನ್ನು ವರದಿ ಮಾಡದಂತೆ ಕೇಂದ್ರ ಸರಕಾರ ಮಾಧ್ಯಮ ನಿಷೇಧ ಹೇರಿತ್ತು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.