ಲಾಕ್ ಡೌನ್ ಸಂಕಟ- ಲಕ್ಷಾಂತರ ರೂಪಾಯಿ ಬಾಡಿಗೆಯನ್ನೇ ಮನ್ನಾ ಮಾಡಿದ ಬಂಟ್ವಾಳದ ಮುಹಮ್ಮದ್ ಹಸನ್: ವ್ಯಾಪಕ ಮೆಚ್ಚುಗೆ

0
938

ಸನ್ಮಾರ್ಗ ವಾರ್ತೆ

ಪಾಣೆಮಂಗಳೂರು, ಎ. 2೨: ಇಲ್ಲಿನ ಬೈಪಾಸ್ ರಸ್ತೆಯಲ್ಲಿರುವ ಬಿ.ಎಚ್.ಕಾಂಪ್ಲೆಕ್ಸ್ ಮಾಲಕರಾದ ಮುಹಮ್ಮದ್ ಹಸನ್ ಅವರು ತನ್ನ ಕಟ್ಟಡದಲ್ಲಿರುವ 12 ಮನೆಗಳು, 21 ಅಂಗಡಿಗಳ ಎಪ್ರಿಲ್ ತಿಂಗಳ ಬಾಡಿಗೆಯನ್ನು ಮನ್ನಾ ಮಾಡುವ ಮೂಲಕ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ.

ತನ್ನ ಕಟ್ಟದಲ್ಲಿರುವ ಎಲ್ಲಾ ಬಾಡಿಗೆದಾರರ ಒಂದು ತಿಂಗಳ ಬಾಡಿಗೆಯನ್ನು ಅವರು ಮನ್ನಾ ಮಾಡಿರುವುದಲ್ಲದೆ ಲಾಕ್ ಡೌನ್ ಹೀಗೆಯೇ ಮುಂದುವರಿದರೆ ಮುಂದಿನ ತಿಂಗಳ ಬಾಡಿಗೆಯನ್ನೂ ಮಾನ್ನಾ ಮಾಡುವ ಸೂಚನೆಯನ್ನೂ ನೀಡಿದ್ದಾರೆ.

ಬಂಟ್ವಾಳ ತಾಲೂಕಿನ ಬರಿಮಾರು ನಿವಾಸಿ ದಿ. ಹಸನಬ್ಬ ಎಂಬವರ ಪುತ್ರ ಮುಹಮ್ಮದ್ ಹಸನ್ ಅವರೇ ಈ ಮಾದರೀ ನಿರ್ಧಾರ ಮಾಡಿದವರಾಗಿದ್ದು, ಅವರ ಬಿ.ಎಚ್.ಕಾಂಪ್ಲೆಕ್ಸ್ ನಲ್ಲಿರುವ 21 ಅಂಗಡಿಗಳಲ್ಲಿ ಹೊಟೇಲ್, ಮೆಡಿಕಲ್, ದಿನಸಿ ಸಾಮಗ್ರಿ, ಬೇಕರಿ, ತರಕಾರಿ, ಫ್ಯಾನ್ಸಿ, ಟ್ರಾವೆಲ್ ಏಜನ್ಸಿ, ಬ್ಯೂಟಿ ಪಾರ್ಲರ್, ಸಲೂನ್, ಕ್ರಿಶ್ಚಿಯನ್ ಪ್ರಾರ್ಥನಾ ಕೊಠಡಿ ಸೇರಿ ಒಟ್ಟು 21 ಅಂಗಡಿಗಳು ಇವೆ. ಅಲ್ಲದೆ 12 ಬಾಡಿಗೆ ಮನೆಗಳೂ ಇವೆ. ಆದ್ದರಿಂದ ತಿಂಗಳೊಂದರಲ್ಲಿ ಲಕ್ಷಾಂತರ ರೂಪಾಯಿ ಬಾಡಿಗೆ ಬರುತ್ತಿದ್ದು, ಆದರೂ ಹಣದ ಮುಖ ನೋಡದೆ ಜನರ ಮುಖ ನೋಡಿದ ಅವರ ಹೃದಯ ವೈಶಾಲ್ಯತೆಗೆ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ವಿದೇಶದಲ್ಲಿ ಉದ್ಯೋಗದಲ್ಲಿರುವ ಮುಹಮ್ಮದ್ ಹಸನ್ ಸದ್ಯ ರಜೆಯಲ್ಲಿ ಊರಿಗೆ ಬಂದಿದ್ದು ಅವರಿಗೆ ಪತ್ನಿ, ನಾಲ್ವರು ಮಕ್ಕಳಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.