ಚೆನ್ನೈ: ಕೊರೊನಾ ವ್ಯಾಕ್ಸಿನ್ ಮೊದಲ ಹಂತದ ಪರೀಕ್ಷೆ ಯಶಸ್ವಿ

0
689

ಸನ್ಮಾರ್ಗ ವಾರ್ತೆ

ಚೆನ್ನೈ, ಎ. 23: ಕೊರೊನಾ ವಿರುದ್ಧ ವ್ಯಾಕ್ಸಿನ್ ಕಂಡು ಹುಡುಕುವುದರಲ್ಲಿ ವಿವಿಧ ದೇಶಗಳಲ್ಲಿ ಪರಸ್ಪರ ಸ್ಪರ್ಧೆಯೇ ಇದ್ದು ಇದಕ್ಕಾಗಿ ಕೋಟ್ಯಂತರ ರೂಪಾಯಿ ವ್ಯಯಿಸಲಾಗುತ್ತಿದೆ. ತಮಿಳ್ನಾಡಿನ ಡಾ. ಎಂಜಿ ಆರ್ ಮೆಡಿಕಲ್ ವಿಶ್ವವಿದ್ಯಾನಿಲಯ ಮೊದಲ ಹಂತದ ಪರೀಕ್ಷೆಯಲ್ಲಿ ಯಶಸ್ಸು ಪಡೆದಿದೆ ಎಂದು ಉಪಕುಲಪತಿ ಸುಧಾ ಶೇಷಯ್ಯನ್ ತಿಳಿಸಿದರು. ಮೂರು ವಾರಗಳಿಂದ ಸಂಶೋಧನೆ ನಡೆಯುತ್ತಿತ್ತು. ರಿವರ್ಸ್ ವ್ಯಾಕ್ಸಿನೋಲಜಿ ಎಂಬ ತಂತ್ರಜ್ಞಾನದ ಮೂಲಕ ಹೊಸ ಸಿಂಥೆಟಿಕ್ ಪಾಲಿಮರ್ಡೆಡ್ ವ್ಯಾಕ್ಸಿನ್ ಕಂಡು ಹುಡುಕಲಾಗಿದೆ ಎಂದು ಸುಧಾ ತಿಳಿಸಿದರು. ತನ್ನೊಂದಿಗೆ ಡಾ. ಪುಷ್ಪಕಲಾ, ಡಾ. ಶ್ರೀನಿವಾಸನ್, ಡಾ. ತಮನ್ನಾ ಬಜಂತ್ರಿ ತಂಡ ಸಂಶೋಧನೆಗೆ ನೇತೃತ್ವ ನೀಡಿದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ರೆಉಲೇಟರಿ ಏಜೆನ್ಸಿಗಳು ಮತ್ತು ಅಮೆರಿಕದ ಪ್ರತಿರೋಧ ಮದ್ಯ ಕೊಲೊಬರೆಟ್ಟರಿ ಕೇಂದ್ರದ ಅನುಮತಿ ಸಹಿತ ಹಲವು ಕ್ರಮಗಳನ್ನು ಪೂರ್ತಿ ಮಾಡಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.