ತಮಿಳ್ನಾಡಿನಲ್ಲಿ ಆರೋಗ್ಯ ಕಾರ್ಯಕರ್ತರು ಮೃತರಾದರೆ 50 ಲಕ್ಷ ರೂ. ನಷ್ಟ ಪರಿಹಾರ

0
454

ಸನ್ಮಾರ್ಗ ವಾರ್ತೆ

ಚೆನ್ನೈ, ಎ. 23: ತಮಿಳ್ನಾಡಿನಲ್ಲಿ ಕೊರನಾ ಪ್ರತಿರೋಧ ಹೋರಾಟದಲ್ಲಿ ಕೆಲಸ ಮಾಡುವ ವೇಳೆ ಆರೋಗ್ಯ ಕಾರ್ಯಕತರು ಮೃತಪಟ್ಟರೆ ಅವರಿಗೆ ಸರಕಾರಿ ಗೌರವಗಳೊಂದಿಗೆ ಮೃತದೇಹ ಸಂಸ್ಕಾರ ಮತ್ತು 50 ಲಕ್ಷ ರೂಪಾಯಿಯ ಧನ ಸಹಾಯ ನೀಡಲಾಗುವುದು ಎಂದು ಸರಕಾರ ಘೋಷಿಸಿದೆ. ಈ ಹಿಂದೆ 10 ಲಕ್ಷ ರೂಪಾಯಿ ಧನ ಸಹಾಯವನ್ನು ಘೋಷಿಸಿತ್ತು. ಈಗ ಈ ಮೊತ್ತವನ್ನು ಹೆಚ್ಚಿಸಿ ಸರಕಾರ ಆದೇಶ ಹೊರಡಿಸಿದೆ. ಇದರಲ್ಲಿ ವೈದ್ಯರು ನರ್ಸ್‍ಗಳ ಸಹಿತ ಆರೋಗ್ಯ ಕಾರ್ಯಕರ್ತರು ಒಳಪಡಲಿದ್ದಾರೆ.

ರೋಗ ಪ್ರತಿರೋಧ ಕೆಲಸಗಳಲ್ಲಿ ತೊಡಗಿಸಿಕೊಂಡ ಆರೋಗ್ಯ ಇಲಾಖೆ, ಪೊಲೀಸ್, ಸ್ಥಳೀಯಾಡಳಿತ ಇಲಾಖೆ, ಶುಚಿತ್ವ ಕಾರ್ಮಿಕರಿಗೂ ಧನ ಸಹಾಯ ಸಿಗಲಿದೆ. ಈ ವಿವರಗಳನ್ನು ಬುಧವಾರ ತಮಿಳ್ನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿ ಸ್ವಾಮಿ ನೀಡಿದರು. ಇತ್ತೀಚೆಗೆ ಚೆನ್ನೈಯಲ್ಲಿ ಇಬ್ಬರು ವೈದ್ಯರು ಕೊರೊನಾದಿಂದ ಮೃತಪಟ್ಟಿದ್ದು ಅವರ ಮೃತದೇಹ ಸಂಸ್ಕರಿಸದಂತೆ ಸ್ಥಳೀಯ ನಿವಾಸಿಗಲು ತಡೆದದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.