ಸನ್ಮಾರ್ಗ ವಾರ್ತೆ
ನವದೆಹಲಿ, ಏಪ್ರಿಲ್ ಇಂಡಿಯಾ ಟುಡೇ ಗ್ರೂಪ್ ನ ಸಂಪಾದಕೀಯ ಸಲಹೆಗಾರ ಮತ್ತು ನಿರೂಪಕರಾಗಿರುವ ಖ್ಯಾತ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಮತ್ತು ರಿಪಬ್ಲಿಕ್ ಟಿವಿಯ ನಿರೂಪಕ ಅರ್ನಬ್ ಗೋಸ್ವಾಮಿ ನಡುವೆ ಮಾತಿನ ಚಕಮಕಿ ನಡೆದಿದೆ.
ಎಡಿಟರ್ಸ್ ಗಿಲ್ಡ್ ನ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ರಿಪಬ್ಲಿಕ್ ಟಿವಿಯ ಲೈವ್ ಕಾರ್ಯಕ್ರಮದಲ್ಲಿ ಅರ್ನಾಬ್ ಗೋಸ್ವಾಮಿ ಘೋಷಿಸಿದ್ದರು.
ಮಹಾರಾಷ್ಟ್ರದ ಪಾಲ್ ಘರ್ ಘಟನೆಗೆ ಸಂಬಂಧಿಸಿ ಎಡಿಟರ್ಸ್ ಗಿಲ್ಡ್ ಸಮರ್ಪಕವಾಗಿ ಪ್ರತಿಕ್ರಿಯಿಸಿಲ್ಲ ಎಂದು ದೂರಿ ಎಪ್ರಿಲ್ 21ರಂದು ರಾಜೀನಾಮೆಯನ್ನು ಘೋಷಿಸಿದ್ದರು ಮಾತ್ರವಲ್ಲ ಎಡಿಟರ್ಸ್ ಗಿಲ್ಡ್ ನ ಅಧ್ಯಕ್ಷ ಶೇಖರ್ ಗುಪ್ತ ಅವರಿಗೆ ನಾಚಿಕೆಯಾಗಬೇಕು ಎಂದು ಅವರು ಆ ಸಂದರ್ಭದಲ್ಲಿ ಹೇಳಿದ್ದರು.
ಆದರೆ ಈ ಘೋಷಣೆಗೆ ಉತ್ತರ ನೀಡಿರುವ ರಾಜದೀಪ್ ಸರ್ದೇಸಾಯಿಯವರು, ಕಳೆದ ಹನ್ನೆರಡು ವರ್ಷಗಳಲ್ಲಿ ಎಡಿಟರ್ಸ್ ಗಿಲ್ಡ್ ನ ಒಂದೇ ಒಂದು ಸಭೆಯಲ್ಲಿ ಭಾಗವಹಿಸದ, ಯಾವುದೇ ಚರ್ಚೆಯಲ್ಲಿ ಭಾಗವಹಿಸದ ಮಾತ್ರವಲ್ಲ ಪತ್ರಕರ್ತರ ಮೇಲೆ ಹಲ್ಲೆ ಮತ್ತು ಹತ್ಯೆ ನಡೆದಾಗಲೂ ಅವರ ಪರವಾಗಿ ನಿಲ್ಲದ ವ್ಯಕ್ತಿ ರಾಜೀನಾಮೆ ನೀಡಿದ್ದಾರೆ ಎಂದು ಅವರು ಛೇಡಿಸಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












