ನ್ಯೂಯಾರ್ಕ್ ನಲ್ಲಿ ಬೆಕ್ಕುಗಳಿಗೂ ಕೊರೊನಾ

0
791

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್, ಎ. 24: ಅಮೆರಿಕದಲ್ಲೀಗ ಕೊರೊನಾ ಬೆಕ್ಕುಗಳಲ್ಲಿಯೂ ಕಂಡು ಬಂದಿದೆ. ಕೊರೊನಾ ಕೇಂದ್ರವಾಗಿರುವ ನ್ಯೂಯಾರ್ಕ್‍ನಲ್ಲಿ ಸಾಕು ಬೆಕ್ಕುಗಳಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಅಮೆರಿಕದಲ್ಲಿ ಸಾಕು ಪ್ರಾಣಿಗಳಲ್ಲಿ ಮೊದಲ ಬಾರಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಎರಡು ಬೆಕ್ಕುಗಳಲ್ಲಿ ಕೊರನಾದ ಸಣ್ಣ ಲಕ್ಷಣಗಳು ಕಂಡು ಬಂದಿದೆ. ಶೀಘ್ರದಲ್ಲಿ ಅದು ಗುಣಮುಖವಾಗಲಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಬೆಕ್ಕುಗಳ ಮಾಲಕನಿಗೆ ಕೊರನಾ ಬಂದಿತ್ತು. ಆ ಮನೆಯ ಇತರ ಸದಸ್ಯರಲ್ಲಿ ಕೊರೊನಾ ಕಂಡು ಬಂದಿಲ್ಲ. ಮನೆಯಲ್ಲಿರುವ ಬೇರೆ ಬೆಕ್ಕುಗಳಿಗೆ ಕೊರೊನಾ ಲಕ್ಷಣಗಳು ಗೋಚರಿಸಿಲ್ಲ. ಕೊರೊನ ದೃಢಪಟ್ಟಿರುವವರು ಸಾಕು ಪ್ರಾಣಿಗಳಿಂದ ದೂರ ಇರಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.