ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 474: ಇಂದು ಪ್ಲಾಸ್ಮಾ ಚಿಕಿತ್ಸೆ

0
482

ಸನ್ಮಾರ್ಗ ವಾರ್ತೆ

ಬೆಂಗಳೂರು ಎಪ್ರಿಲ್ 25- ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 474 ಕ್ಕೆ ಏರಿದ್ದು ಹೊಸದಾಗಿ 21 ಮಂದಿಗೆ ಸೋಂಕು ತಗಲಿದೆ. ಬೆಂಗಳೂರಿನ ಹೊಂಗಸಂದ್ರದಲ್ಲಿ ಸೋಂಕಿತರ ಸಂಖ್ಯೆ 21ಕ್ಕೆ ತಲುಪಿದ್ದು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರವಾಗಿದ್ದ ಪಾದರಾಯನಪುರದ ಬಂಧಿತರ ಪೈಕಿ ಇಬ್ಬರಲ್ಲಿ ಸೋಂಕು ಈ ಹಿಂದೆ ಕಾಣಿಸಿಕೊಂಡಿದ್ದು, ಶುಕ್ರವಾರ ಮತ್ತೆ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಮೈಸೂರಿನಲ್ಲಿ ಎರಡು ದಿನಗಳಿಂದ ಹೊಸ ಪ್ರಕರಣಗಳು ವರದಿಯಾಗಿಲ್ಲ. ಬೆಂಗಳೂರಿನಲ್ಲಿ 19 ಪ್ರಕರಣಗಳು ವರದಿಯಾಗಿದ್ದು, ಬಾಗಲಕೋಟೆಯಲ್ಲಿ 3, ಬೆಳಗಾವಿಯಲ್ಲಿ 2, ವಿಜಯಪುರದಲ್ಲಿ 2, ಮಂಡ್ಯ, ಚಿಕ್ಕಬಳ್ಳಾಪುರ ಮತ್ತು ತುಮಕೂರಿನಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ.

ಇದೇ ವೇಳೆ ರಾಜ್ಯದಲ್ಲಿ ಇವತ್ತು ಪ್ಲಾಸ್ಮಾ ಚಿಕಿತ್ಸೆ ನಡೆಯಲಿದೆ.

ಕೊರೋನಾದಿಂದ ಗುಣಮುಖ ಹೊಂದಿದ ವ್ಯಕ್ತಿಯ ರಕ್ತದಲ್ಲಿರುವ ಪ್ರತಿರೋಧಕ ಕಣಗಳನ್ನು ತೆಗೆದು ಬೇರೊಬ್ಬ ರೋಗಿಯ ದೇಹಕ್ಕೆ ಸೇರಿಸುವುದನ್ನು ಪ್ಲಾಸ್ಮಾ ಚಿಕಿತ್ಸೆ ಎನ್ನಲಾಗುತ್ತದೆ. ಗುಣಮುಖ ಹೊಂದಿದ ರೋಗಿಯ ರಕ್ತದಲ್ಲಿರುವ ಪ್ರತಿರೋಧಕ ಕಣಗಳು ವೈರಾಣವನ್ನು ಹಿಮ್ಮೆಟ್ಟಿಸಿರುವುದರಿಂದ ಇಂತಹ ಪ್ರಬಲ ಪ್ರತಿರೋಧಕ ಕಣಗಳು ಇತರ ರೋಗಿಗಳಲ್ಲಿ ಚಿಕಿತ್ಸೆಗೆ ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಲಾಗುತ್ತದೆ. ಕೇರಳದಲ್ಲಿ ಇಂತಹ ಪ್ಲಾಸ್ಮಾ ಚಿಕಿತ್ಸೆ ಯಶಸ್ವಿಯಾಗಿತ್ತು.

ರಾಜ್ಯದಲ್ಲಿ ಪ್ಲಾಸ್ಮಾ ಚಿಕಿತ್ಸೆಗೆ ದಾನಿಯೂ ಸಿಕ್ಕಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.