5 ಲಕ್ಷ ಹಲಾಲ್ ಕಿಟ್ ಗಳನ್ನು ಉಚಿತವಾಗಿ ವಿತರಿಸಿದ ನ್ಯೂಯಾರ್ಕ್ ಮುನ್ಸಿಪಾಲಿಟಿ: ರಮಝಾನ್ ವಿಶೇಷ

0
1076

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್, ಎ. 25: ಪವಿತ್ರ ರಮಝಾನ್‍ನಲ್ಲಿ ಐದು ಲಕ್ಷದಷ್ಟು ಹಲಾಲ್ ಆಹಾರವನ್ನು ಉಚಿತವಾಗಿ ನೀಡಿದೆ ನ್ಯೂಯಾರ್ಕ್ ಸಿಟಿ ಮುನ್ಸಿಪಾಲಿಟಿ. ಇತರೆಲ್ಲರಿಗಿಂತ ಭಿನ್ನವಾದ ಮತ್ತು ಮಾದರಿಯುತವೂ ಆದ ಕಾರ್ಯಕ್ಕೆ ರಮಝಾನ್ ವೇಳೆ ನ್ಯೂಯಾರ್ಕ್ ಸಿಟಿ ಮುನ್ಸಿಪಾಲಿಟಿ ಇಳಿದಿರುವುದು ಗಮನಾರ್ಹ. ಹಸಿದವರಿಗೆ ಅನ್ನ ರಮಝಾನ್‍ನಲ್ಲಿ ಪುಣ್ಯ ಕಾರ್ಯ. ಅಗತ್ಯವುಳ್ಳವರಿಗೆ ತಲುಪಿಸಿ ಕೊಡುವುದು ಮತ್ತು ಜನರಿಗೆ ಮಸೀದಿಗೆ ಹೋಗಲು ಈಗ ಆಗುವುದಿಲ್ಲ ಎಂದು ಆಯುಕ್ತ ಮೇ ಯರ್ ಬಿಲ್ ಡೆ ಬ್ಲಾಸಿಯೊ ಹೇಳಿದರು. ಎರಡು ಮಿಲಿಯನ್ ಹಲಾಲ್ ಆಹಾರವನ್ನು ತಯಾರಿಸಿ ಉಚಿತವಾಗಿ ನ್ಯೂಯಾರ್ಕ್ ಮುನ್ಸಿಪಾಲಿಟಿ ವಿತರಿಸಿದೆ.

ಕಳೆದ ವರ್ಷಗಳಲ್ಲೆಲ್ಲ ನ್ಯೂಯಾರ್ಕ್‍ ಮಸೀದಿಗಳಲ್ಲಿ ಉಪವಾಸ ತೊರೆಯುವ ಕಾರ್ಯಕ್ರಮಗಳಿದ್ದುವು. ಈ ಸಮಯದಲ್ಲಿ ಜನರಿಗೆ ಉಚಿತ ಹಲಾಲ್ ಆಹಾರ ಹಂಚಲಾಗುತ್ತಿತ್ತು. ಈ ವರ್ಷ ಕೊರೊನಾ ಇರುವುದರಿಂದ ಮಸೀದಿ, ಚರ್ಚ್ ಮತ್ತು ಸಿನಾಗೊಗ್‍ಗಳು ( ಯಹೂದಿ ಪ್ರಾರ್ಥನೆ ಸ್ಥಳ) ಮುಚ್ಚಿವೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.