ಶಾಸಕರ ಕಿಟ್‍ಗೆ ಕಿತ್ತಾಟ: ಪಂಚಾಯತ್ ಸದಸ್ಯೆಯಿಂದ ಹಲ್ಲೆ ದೂರು

0
548

ಸನ್ಮಾರ್ಗ ವಾರ್ತೆ

ನೆಟ್ಟೂರ್, ಎ. 27: ಕುಂಬಳೆ ಪಂಚಾಯತಿನ ಬಡ ಕುಟುಂಬಗಳಿಗೆ ಶಾಸಕರು ನೀಡಿದ ಕಿಟ್‍ನ ಕುರಿತು ಪನಂಗಾಡ್ ಎಂಬಲ್ಲಿ ಬಡಿದಾಟ ನಡೆದಿದೆ. ಕಿಟ್ ತೆಗೆದುಕೊಳ್ಳಲು ಬಂದ ಮೀನುಗಾರ್ತಿ ಮಹಿಳೆಗೆ ಯುಡಿಎಫ್‍ನ ಪಂಚಾಯತ್ ಸದಸ್ಯೆ ಹೊಡೆದಿದ್ದು, ಕುಂಬಳಂ ಪಂಚಾಯತಿನ 10ನೇ ವಾರ್ಡಿನ ಕುನ್ನತ್ತ್ ಮನೆಯ ಮಿನಿ ಎಂಬ ಮಹಿಳೆಗೆ ಪೆಟ್ಟು ಬಿದ್ದಿದೆ. ಯುಡಿಎಫ್‍ನ ಸದಸ್ಯ ಶೆರ್ಲಿ ಜಾರ್ಜ್ ಮನೆಗೆ ಮೀನುಗಾರ ಮಹಿಳೆ ಶಾಸಕರ ಕಿಟ್ ಪಡೆಯಲು ಹೋಗಿದ್ದರು. ಮೀನುಗಾರರಿಗೆ ಸೌಲಭ್ಯ ಮತ್ತು ಸರಕಾರದ ರೇಶನ್ ಸಿಗುತ್ತಿದೆ ಎಂದು ಹೋಗಿದ್ದರು. ಮಾಜಿ ಪಂಚಾಯತ್ ಅಧ್ಯಕ್ಷೆ ಆಗಿರುವ ಶೆರ್ಲಿ ಕೈಗೆ ಸಿಕ್ಕಿದ ಬಾಟ್ಲಿಯಿಂದ ಮಿನಿಯ ಮೇಲೆ ಹಲ್ಲೆ ಮಾಡಿದ್ದಾರೆ, ನಿಂದಿಸಿದ್ದಾರೆ. ತನ್ನ ಮುಂದೆ ಕಿಟ್ ಎಸೆದು ಮುಖಕ್ಕೆ ಉಗುಳಿದರು ಎಂದು ಮಿನಿ ಹೇಳಿದರು.

ಕಿಟ್ ತೆಗೆಯದೆ ಹೊರಟಾಗ ಶೆರ್ಲಿ ಮಿನಿಯ ಮೇಲೆ ಕಲ್ಲೆಸೆದರು. ಗಾಯಗೊಂಡಿರುವ ಮಿನಿ ಪನಂಗಾಡ್ ಪ್ರಾಥಮಿಕ ಆರೋಗ್ಯ ಆಸ್ಪತ್ರೆಯಲ್ಲಿ ನಂತರ ತೃಪ್ಪುಣಿತ್ತುರ ತಾಲೂಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡರು. ಶಾಸಕರು ಮುನ್ನೂರು ಕಿಟ್‍ಗಳನ್ನು ಪಂಚಾಯತ್‍ಗೆ ಕೊಟ್ಟಿದ್ದರು. ಹದಿನೈದು ಕಿಟ್‍ಗಳನ್ನು ಮೆಂಬರ್ ಗಳ ಮೂಲಕ ವಿತರಿಸಲಾಗಿತ್ತು. ಕಿಟ್ ಸಿಕ್ಕಿಲ್ಲ ಎಂದು ಹೊಡೆದಾಟ ನಡೆದಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.