10 ದಿನಗಳಲ್ಲಿ ಯುಪಿ-ಬಿಹಾರಕ್ಕೆ ತೆರಳಿದ 25 ಲಕ್ಷ ವಲಸೆ ಕಾರ್ಮಿಕರಲ್ಲಿ ನಡೆದವರೇ ಹೆಚ್ಚು

0
817

ಸನ್ಮಾರ್ಗ ವಾರ್ತೆ

ಭೋಪಾಲ್,ಮೆ.14: ಲಾಕ್‌ಡೌನ್ ಹಂತ-3 ರ ಕೊನೆಯ ದಿನಗಳಲ್ಲಿ, ಕಾರ್ಮಿಕರ ವಲಸೆಯ ಬವಣೆಯನ್ನು ಬಿತ್ತರಿಸುವ ಚಿತ್ರಣಗಳು ಹೊರಬರುತ್ತಿವೆ. ಕಳೆದ 10 ದಿನಗಳಲ್ಲಿ ಮಧ್ಯಪ್ರದೇಶದ ಮೂಲಕ 25 ಲಕ್ಷಕ್ಕೂ ಹೆಚ್ಚು ಜನರು ಯುಪಿ-ಬಿಹಾರಕ್ಕೆ ಹೋಗಿದ್ದಾರೆ. ಇವರೆಲ್ಲರೂ ಮಹಾರಾಷ್ಟ್ರದ ವಿವಿಧ ನಗರಗಳಿಂದ ತಮ್ಮ  ಪ್ರಯಾಣವನ್ನು ಪ್ರಾರಂಭಿಸಿದ್ದರು. ವಾಹನಗಳಿಗಿಂತ ಹೆಚ್ಚಾಗಿ ಕಾಲ್ನಡಿಗೆ ಪ್ರಯಾಣವನ್ನು ಕೈಗೊಂಡ ಕಾರ್ಮಿಕರ ಗುಂಪುಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಡುಬರುತ್ತವೆ.

ಮಧ್ಯಪ್ರದೇಶದ ಸೆಂಧ್ವಾ ಚೆಕ್‌ಪೋಸ್ಟ್ ನಾಕಾ ಮುಂಬೈ-ಆಗ್ರಾ ಹೆದ್ದಾರಿಯಲ್ಲಿದೆ. ಮಹಾರಾಷ್ಟ್ರದಿಂದ ಪ್ರತಿದಿನ ಸಾವಿರಾರು ವಾಹನಗಳು ಇಲ್ಲಿಂದ ಹೊರಡುತ್ತಿವೆ. ಒಟ್ಟಾರೆಯಾಗಿ, ಯುಪಿ-ಬಿಹಾರಕ್ಕೆ ಹೋಗುವ ಕಾರ್ಮಿಕರು ಹತ್ತಿಕ್ಕಿ ಹತ್ತಿಕ್ಕಿ ತುಂಬಲಾಗುತ್ತಿದೆ. ಮೇ 3 ರಿಂದ ಮೇ 13 ರವರೆಗೆ ಸೆಂಧ್ವಾ ಚೆಕ್‌ಪೋಸ್ಟ್‌ನಲ್ಲಿ 80 ಸಾವಿರಕ್ಕೂ ಹೆಚ್ಚು ವಾಹನಗಳು ಹಾದುಹೋಗಿದ್ದು ಅವುಗಳಲ್ಲಿ ಹೆಚ್ಚಿನವು ಟ್ರಕ್ ಗಳು, ಮಿನಿ ಟ್ರಕ್ ಗಳು, ಜೀಪ್ ಗಳು ಮತ್ತು ಆಟೋಗಳಿವೆ. 10 ದಿನಗಳಲ್ಲಿ ಮಹಾರಾಷ್ಟ್ರದಿಂದ ಮಧ್ಯಪ್ರದೇಶಕ್ಕೆ 25 ಲಕ್ಷಕ್ಕೂ ಹೆಚ್ಚು ಜನರು ಪ್ರವೇಶಿಸಿದ್ದಾರೆ ಎಂದು ಸೆಂಧ್ವಾ ಟೋಲ್ ಟ್ಯಾಕ್ಸ್ ನೌಕರರು ತಿಳಿಸಿದ್ದಾರೆ.



ಮಧ್ಯಪ್ರದೇಶದಲ್ಲಿ, ಸೋಂಕಿತರ ಸಂಖ್ಯೆ 4185 ತಲುಪಿದೆ. ಇಂದೋರ್ ಜಿಲ್ಲೆಯಲ್ಲಿ ಇದುವರೆಗೆ ಅತಿ ಹೆಚ್ಚು 2107 ಪ್ರಕರಣಗಳಿವೆ. ಇದು ಒಟ್ಟು ಸೋಂಕಿನ 50% ಕ್ಕಿಂತ ಹೆಚ್ಚು. ಇಂದೋರ್ ನಲ್ಲಿ, 95 ರೋಗಿಗಳು ಸಾವನ್ನಪ್ಪಿದ್ದು ಮತ್ತು 974 ಗುಣಮುಖರಾಗಿದ್ದಾರೆ. ಭೋಪಾಲ್ 906 ಸೋಂಕು ಪ್ರಕರಣಗಳಿದ್ದು, 35 ಜನರು ಬಲಿಯಾಗಿದ್ದು, 553 ಜನರು ಗುಣಮುಖರಾಗಿದ್ದಾರೆ. ರಾಜ್ಯಾದ್ಯಂತ ಒಟ್ಟು 231 ಸಾವುಗಳು ವರದಿಯಾಗಿದ್ದು, 2073 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.