ಸೌದಿಅರೇಬಿಯಾ: ಈದ್ ರಜೆಯಲ್ಲಿಯೂ ಕರ್ಫ್ಯೂ

0
765

ಸನ್ಮಾರ್ಗ ವಾರ್ತೆ

ರಿಯಾದ್,ಮೇ. 14: ಸೌದಿ ಅರೇಬಿಯಾದಲ್ಲಿ ಈದುಲ್ ಫಿತ್ರ್ ರಜೆಯಲ್ಲಿ  ಕರ್ಫ್ಯೂ ಇರಲಿದೆ. ಕೊನೆಯ ಉಪವಾಸದಿಂದ ಐದು ದಿವಸದವರೆಗೆ ಕರ್ಫ್ಯೂ ಮುಂದುವರಿಯುತ್ತದೆ.

ದೇಶದಲ್ಲಿ ಕೊರೋನಾ ಪ್ರಕರಣಗಳಲ್ಲಿ ಹೆಚ್ಚಳವಾಗಿದ್ದು ಕರ್ಫ್ಯೂವನ್ನು ಬಲಪಡಿಸಿರುವುದಕ್ಕೆ ಕಾರಣವೆಂದು ಗೃಹ ಸಚಿವಾಲಯ ತಿಳಿಸಿದೆ. ಮೇ 23ರಿಂದ ಮೇ 27ರವರೆಗೆ ಸೌದಿ ಅರೇಬಿಯಾದಾದ್ಯಂತ ಸಂಪೂರ್ಣ ಕರ್ಫ್ಯೂ ಇರಲಿದೆ ಎಂದು ಗೃಹ ಸಚಿವಾಲಯ ತಿಳಿಸಿತು.

ಗಲ್ಫ್ ವಲಯದಲ್ಲಿ ಅತಿ ಹೆಚ್ಚು ಕೊರೋನಾ ಸೋಂಕು ಪ್ರಕರಣಗಳು ಸೌದಿ ಅರೇಬಿಯಾದಿಂದ ವರದಿಯಾಗಿದ್ದು ಇಲ್ಲಿ 42,925 ಮಂದಿ ಕೊರೋನಾದಿಂದ ಬಳಲುತ್ತಿದ್ದಾರೆ. ಇವರಲ್ಲಿ 264 ಮಂದಿ ಮೃತಪಟ್ಟಿದ್ದಾರೆ. ಕಳೆದ ತಿಂಗಳು 17 ದಿವಸಗಳ ಕರ್ಫ್ಯೂ ಘೋಷಿಸಲಾಗಿತ್ತು. ಈಗ ಅದನ್ನು ವಿಸ್ತರಿಸಲಾಗಿದೆ.

ಬೆಳಗ್ಗೆ 9 ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ಹೊರಗೆ ಬರಲು ಆಗುವ ರೀತಿಯ ಸಡಿಲಿಕೆ ಇದ್ದು ಇದು ಮೇ 22ರವರೆಗೆ ಮುಂದುವರಿಯಲಿದೆ ಎಂದು ಗೃಹ ಸಚಿವಾಲಯ ತಿಳಿಸಿತು. ಮಕ್ಕಾ ಮತ್ತು ಈಗ ಐಸೊಲೇಟ್ ಮಾಡಿದ ಪ್ರದೇಶಗಳಲ್ಲಿ ಜಾರಿಯಲ್ಲಿರುವ 24 ಗಂಟೆಗಳ ಕರ್ಫ್ಯೂವಿನಲ್ಲಿ ಬದಲಾವಣೆಯಿಲ್ಲ.