ಪಟ್ನಾದ ಕೊರೋನಾ ಆಸ್ಪತ್ರೆಯಲ್ಲಿ ಮಲಗಿದ ನಾಯಿ; ಪಿಪಿಇ ಕಿಟ್ ವಿಲೇವಾರಿಗೂ ನಿರ್ಲಕ್ಷ್ಯ

0
541

ಸನ್ಮಾರ್ಗ ವಾರ್ತೆ

ಪಟ್ನಾ,ಮೇ.14: ನಳಂದಾ ವೈದ್ಯಕೀಯ ಕಾಲೇಜು ಆಸ್ಪತ್ರೆಯನ್ನು (ಎನ್‌ಎಂಸಿಎಚ್) ಕೊರೋನಾ ಡೆಡಿಕೇಟ್ ಆಸ್ಪತ್ರೆಯನ್ನಾಗಿ ಮಾಡಲಾಗಿದೆ. ಕೊರೋನಾದಿಂದ ಬಳಲುತ್ತಿರುವ ರೋಗಿಗಳಿಗೆ ಮಾತ್ರ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಒಂದು ಕಡೆ, ಈ ಆಸ್ಪತ್ರೆಯಿಂದ 100 ಕ್ಕೂ ಹೆಚ್ಚು ರೋಗಿಗಳು ಚೇತರಿಸಿಕೊಂಡು ಮನೆಗೆ ಮರಳಿದ್ದರೆ; ಮತ್ತೊಂದೆಡೆ, ಆಸ್ಪತ್ರೆಯಲ್ಲಿನ ಅವ್ಯವಸ್ಥೆಯಿಂದಾಗಿ ಕೊರೋನಾ ಇನ್ನಷ್ಟು ಹರಡುವ ಭೀತಿಯು ಜನರಲ್ಲಿ ಹೆಚ್ಚಾಗಿದೆ.

ನಾಯಿಗಳು ಎನ್‌ಎಂಸಿಎಚ್ ಮೂಳೆ ಚಿಕಿತ್ಸಕ ವಾರ್ಡ್‌ನಲ್ಲಿ ಸಂಚರಿಸುತ್ತಿವೆ. ದಾರಿತಪ್ಪಿ ಬರುವ ಪ್ರಾಣಿಗಳು ಆಸ್ಪತ್ರೆಯೊಳಗಡೆ ಪ್ರವೇಶಿಸುವುದನ್ನು ತಡೆಯಲು ಇಲ್ಲಿ ಯಾರೂ ಇಲ್ಲ.ನಾಯಿಗಳು ಆಸ್ಪತ್ರೆಯಲ್ಲಿ ಹಾಸಿಗೆ ಮೇಲೆ ಮಲಗುತ್ತಿರುವುದು ಕೂಡ ಕಂಡು ಬರುತ್ತಿದೆ.

ಮತ್ತೊಂದೆಡೆ, ಕಸ ಎಸೆಯಲು ಆಸ್ಪತ್ರೆಯಲ್ಲಿ ಮಹಾನಗರ ಪಾಲಿಕೆ ಇಟ್ಟಿದ್ದ ಡಸ್ಟ್‌ ಬಿನ್‌ನಲ್ಲಿ ಪಿಪಿಇ ಕಿಟ್‌ಗಳು ಮತ್ತು ಮುಖಕವಚಗಳನ್ನು ಎಸೆಯಬಾರದೆಂದು ಹೇಳಿದ್ದರೂ ಕೂಡ ಅನೇಕ ಆರೋಗ್ಯ ಕಾರ್ಯಕರ್ತರು ಕಿಟ್ ಅನ್ನು ಪಾಲಿಬ್ಯಾಗ್‌ನಲ್ಲಿ ಹಾಕುವ ಬದಲು ಅದನ್ನು ತೆರೆದ ಸ್ಥಳಗಳಲ್ಲಿ ಎಸೆಯುತ್ತಿರುವುದು ಕಂಡು ಬಂದಿದೆ.

ಇದು ಅನೇಕ ಜನರಲ್ಲಿ ಸೋಂಕನ್ನು ಹೆಚ್ಚಿಸು ಸಂಭಾವ್ಯಗಳಿವೆ. ಆಸ್ಪತ್ರೆಯ ನಿರ್ವಹಾಕರು ಆರೋಗ್ಯ ಕಾರ್ಯಕರ್ತರಿಗೆ ಮುಖ ಕವಚ ಮತ್ತು ಪಿಪಿಇ ಕಿಟ್‌ಗಳನ್ನು ಬಳಕೆಯ ನಂತರ ಪಾಲಿಬ್ಯಾಗ್‌ಗಳಲ್ಲಿ ಹಾಕವಂತೆ ಸೂಚಿಸಿಸಲು ಒತ್ತಾಯಿಸಲಾಗಿದೆ.

ಪಿಪಿಇ ಕಿಟ್‌ಗಳನ್ನು ಒದಗಿಸುವ ಕಂಪನಿಗಳು ಅದರೊಂದಿಗೆ ಪಾಲಿಬ್ಯಾಗ್ ಅನ್ನು ಸಹ ಒದಗಿಸುತ್ತವೆ, ಕಿಟ್ ಬಳಸಿದ ನಂತರ ಅದನ್ನು ಪಾಲಿಬ್ಯಾಗ್‌ನಲ್ಲಿಯೇ ಹಾಕಬೇಕಿದ್ದು, ಕಂಪೆನಿಯ ಸಿಬ್ಬಂದಿಗಳು ಆಸ್ಪತ್ರೆಗೆ ಬಂದು ಕಿಟ್ ವಿಲೇವಾರಿ ಮಾಡುತ್ತಾರೆ.