ಕೊರೋನಾ ವಿರುದ್ಧ ಪರೀಕ್ಷೆಗೆ 4 ಹೊಸ ಔಷಧಿಗಳು ಸಿದ್ಧ; ಒಂದು ವಾರದೊಳಗೆ ಪ್ರಯೋಗಕ್ಕೆ ತೀರ್ಮಾನ- ಆಯುಷ್ ಸಚಿವಾಲಯ

0
514

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಮೇ.14: ಕೊರೋನಾ ಸೋಂಕಿತರ ವಿರುದ್ಧ ಪರಂಪರಾಗತ ರೀತಿಯಲ್ಲಿ ನಾಲ್ಕು ಔಷಧಗಳನ್ನು ಕಂಡು ಹುಡುಕಿದ್ದೇವೆ. ಒಂದು ವಾರದಲ್ಲಿ ಪರೀಕ್ಷೆಯನ್ನು ನಡೆಸುತ್ತೇವೆ ಎಂದು ಕೇಂದ್ರ ಆಯುಷ್ ಸಚಿವ ಶ್ರೀಪಾದ್ ವೈ ನಾಯಿಕ್ ಹೇಳಿದ್ದಾರೆ.

ಅಯುಷ್ ಸಚಿವಾಲಯ ಆಯುರ್ವೇದ, ಯೋಗ, ಯುನಾನಿ, ಸಿದ್ಧ, ಹೋಮಿಯೊಪತಿ ಹೀಗೆ ಐದು ಆರೋಗ್ಯ ಕ್ಷೇತ್ರವನ್ನು ಸಂಯೋಜಿಸುತ್ತದೆ. ದಿ ಕೌನ್ಸಿಲ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್ ಸಹಕಾರದಲ್ಲಿ ಆಯುಷ್ ಸಚಿವಾಲಯ ಔಷಧ ಪರೀಕ್ಷೆಯನ್ನು ಮಾಡಲಿದೆ. ಕೊರೋನಾ ವಿರುದ್ಧ ಅಭಿವೃದ್ಧಿ ಪಡಿಸಿದ ಮದ್ದುಗಳು ಪರಿಣಾಮಕಾರಿ ಫಲಪ್ರದವಾಗಲಿದೆ ಎಂದು ಶ್ರೀಪಾದ್ ನಾಯಕ್ ಟ್ವೀಟ್ ಮಾಡಿದರು.

ಕೊರೋನಾ ವಿರುದ್ಧ ವ್ಯಾಕ್ಸಿನ್ ಅಭಿವೃದ್ಧಿಪಡಿಸುವವರೆಗೆ ವಿವಿಧ ಮದ್ದುಗಳನ್ನು ನೀಡಿ ರೋಗಿಗಳನ್ನು ಶುಶ್ರೂಷೆ ಮಾಡಲಾಗುತ್ತಿದೆ. ಆದರೆ ಆಯುರ್ವೇದವಾಗಲಿ ಇತರ ಪ್ರಕಾರಗಳಿಂದಾಗಲಿ ಕೊರೋನಾ ಸೋಂಕನ್ನು ಪ್ರತಿರೋಧಿಸಬಹುದೇ ಎಂಬ ಅಧ್ಯಯನವು ನಡೆದಿಲ್ಲ. ರೋಗ ಮುಕ್ತರಾಗಿರುವವರಿಂದ ಶೇಖರಿಸಿದ ಪ್ಲಾಸ್ಮಾವನ್ನು ವೈರಸ್ ಪೀಡಿತರಿಗೆ ಚುಚ್ಚುವುದು ಫಲಪ್ರದವೆಂದು ಮಾತ್ರ ಈಗ ಶೋಧಿಸಲು ಸಾಧ್ಯವಾಗಿದೆ.