ಕಾನ್ಪುರದಲ್ಲಿ ಲಾಕ್ ಡೌನ್ ಉಲ್ಲಂಘನೆ: ಸ್ವಾಮಿ ಶೋಭನ್ ಅಂತಿಮಯಾತ್ರೆಯಲ್ಲಿ ಸಾಮಾಜಿಕ ಅಂತರಕ್ಕೆ ಬೆಲೆ ಕೊಡದೇ ಶಾಸಕರೂ ಸೇರಿ ಸಾವಿರಾರು ಜನ ಶಾಮೀಲು

0
930

ಸನ್ಮಾರ್ಗ ವಾರ್ತೆ

ಕಾನ್ಪುರ,ಮೇ.15: ಪರಮಹಂಸ ಸ್ವಾಮಿ ವಿರಕ್ತಾನಂದ ಉರ್ಫ್ ಶೋಭನ್ ಸರ್ಕಾರ್‌ರವರು ಮೇ 13 ರಂದು ನಿಧನರಾದರು. ಅವರ ಶವವನ್ನು ಕಾನ್ಪುರದ ಬಿಥೂರಿನ ಬಂಡಿ ಮಾತಾ ಘಾಟ್‌ನಲ್ಲಿ ಅಂತಿಮ ವಿಧಿಗಳ ನಂತರ ಗಂಗೆಯಲ್ಲಿ ತೇಲಿ ಬಿಡಲಾಯಿತು. ಈ ಸಂದರ್ಭದಲ್ಲಿ ಲಾಕ್ ಡೌನ್ ನಿಯಮವನ್ನು ಗಾಳಿಗೆ ತೂರಿ ಸಾಮಾಜಿಕ ಅಂತರವನ್ನು ಪಾಲಿಸದೇ ಸಾವಿರಾರು ಜನರು ಹಾಜರಿದ್ದರು. ಇದರಲ್ಲಿ ಶಾಸಕರು ಮತ್ತು ಹಲವು ಪಕ್ಷಗಳ ಉನ್ನತ ನಾಯಕರು ಕೂಡ ಸೇರಿದ್ದರು.

ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ 4200 ಅಪರಿಚಿತ ಜನರ ವಿರುದ್ಧ ಆಡಳಿತವು ಸಾಂಕ್ರಾಮಿಕ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದೆ. ಈ ಪ್ರಕರಣಗಳನ್ನು ಎರಡು ಪೊಲೀಸ್ ಠಾಣೆಗಳಲ್ಲಿ ದಾಖಲಿಸಲಾಗಿದೆ. ಸಂತ ಶೋಭನ್ ಸರ್ಕಾರ್ ಅವರು 1000 ಟನ್ ಚಿನ್ನವು ದೌಂಡಿಯಾ ಖೇಡಾದಲ್ಲಿರುವ ಬಗ್ಗೆ ಭವಿಷ್ಯವಾಣಿ ಹೇಳುವ ಮೂಲಕ ಜನರಲ್ಲಿ ಪರಿಚಿತರಾಗಿದ್ದರು.