600 ಬಡ ಅನಿವಾಸಿಗಳಿಗೆ ವಿಮಾನ ಟಿಕೆಟ್ ವ್ಯವಸ್ಥೆ ಮಾಡಿ ಜನಮನ ಗೆದ್ದ ಮೀಡಿಯಾ ಒನ್ ಟಿವಿ: ಮನಸ್ಸಿದ್ದರೆ ಎಲ್ಲವೂ ಸಾಧ್ಯ

0
608

ಸನ್ಮಾರ್ಗ ವಾರ್ತೆ

ಕೇರಳ,ಮೇ.15: ಗಲ್ಫ್ ದೇಶಗಳಲ್ಲಿ ವಿಮಾನ ಟಿಕೇಟ್ ಮೊತ್ತವನ್ನು ಭರಿಸಲಾಗದ ಭಾರತೀಯ ವಲಸಿಗರಿಗೆ ಊರಿಗೆ ಮರಳಲು ವಿಮಾನ ಟಿಕೆಟ್‌ಗಳನ್ನು ಒದಗಿಸಲು ಅಭಿಯಾನವನ್ನು ಕೈಗೊಂಡಿದ್ದಕ್ಕಾಗಿ ಗಲ್ಫ್ ಮಾಧ್ಯಮಂ ಡೈಲಿ ಮತ್ತು ಮೀಡಿಯಾ ಒನ್ ಟಿವಿಗೆ ವ್ಯಾಪಕ ಪ್ರಶಂಸೆ ಲಭಿಸಿದೆ.

ಉಚಿತ ವಿಮಾನಯಾನವನ್ನು ನೀಡಬೇಕೆಂಬ ಬೇಡಿಕೆಗೆ ಕೇಂದ್ರ ಸರ್ಕಾರವು ತಿರಸ್ಕರಿಸಿದ ಬೆನ್ನಿಗೆ ಈ ಅಭಿಯಾನವು ಅನೇಕ ಸಮಾಜ ಸೇವಕರಿಗೆ ಸ್ಫೂರ್ತಿ ನೀಡುವ ಮೂಲಕ ಸಂಕಷ್ಟದಲ್ಲಿದ್ದ ಜನರಿಗೆ ಸಮಯಕ್ಕೆ ಸರಿಯಾಗಿ ಉತ್ತಮ ಬೆಂಬಲವನ್ನು ಲಭಿಸುವಂತೆ ಮಾಡಿದೆ.

ಕೊರೋನಾ ಲಾಕ್‌ಡೌನ್ ನಿಂದಾಗಿ ಆರ್ಥಿಕತೆಯ ತತ್ತರಿಸಿದ್ದು, ಈಗಾಗಲೇ ಉದ್ಯೋಗ ಕಳೆದುಕೊಂಡು ಪರದಾಡುತ್ತಿರುವ ವಲಸಿಗರಿಗೆ ತಮ್ಮ ಟಿಕೆಟ್‌ಗಳನ್ನು ಮೇ ತಿಂಗಳಲ್ಲಿ ಸಾಮಾನ್ಯ ದರಕ್ಕಿಂತಲೂ ಒಂದು ಪಟ್ಟು ಹೆಚ್ಚಿನ ದರದಲ್ಲಿ ಖರೀದಿಸುವುದು ಅಸಾಧ್ಯದ ಮಾತಾಗಿತ್ತು.

“Mission Wings Of Compassion” ಎಂಬ ಹೆಸರಿನಲ್ಲಿ ಕೇರಳದ ಎರಡು ಪ್ರಮುಖ ಮಾಧ್ಯಮ ಕಂಪೆನಿಗಳು ಜಂಟಿಯಾಗಿ ಅಭಿಯಾನವನ್ನು ಆರಂಭಿಸುವ ಮೂಲಕ ಅಗತ್ಯವಿರುವ 600 ವಲಸಿಗರಿಗೆ ಟಿಕೆಟ್‌ಗಳನ್ನು ಹೊಂದಿಸಲು ಪ್ರಯತ್ನಿಸಿತು.

ಅಚ್ಚರಿಯೇನೆಂದರೆ, ಅಭಿಯಾನ ಪ್ರಾರಂಭಿಸಿದ ಎರಡೇ ದಿನಗಳಲ್ಲಿ ಮಿಷನ್ 500 ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಸಂಗ್ರಹಿಸಿದೆ. ಈ ಗೆಲುವಿಗೆ ಜಿಸಿಸಿ ದೇಶಗಳಲ್ಲಿರುವ ಕೇರಳೀಯ ಬ್ಯುಸಿನೆಸ್ ಮ್ಯಾನ್‌ಗಳ ನೆರವಿನ ಹಸ್ತಕ್ಕೆ ಅಭಿಯಾನವು ಧನ್ಯವಾದಗಳನ್ನು ಸಲ್ಲಿಸಿದೆ‌.

ಹೆಚ್ಚಿನ ಸಂಖ್ಯೆಯಲ್ಲಿ ಬಡ ವಲಸಿಗರು ತಮ್ಮ ಮನೆಗೆ ಸುರಕ್ಷಿತವಾಗಿ ಮತ್ತು ಸಂತೋಷದಿಂದ ತಲುಪುವುದನ್ನು ನಾವು ಎದುರು ನೋಡುತ್ತಿದ್ದೇವೆ. ಎಲ್ಲ ಸಮಾಜಸೇವಕರು, ದಾನಿಗಳನ್ನು ಈ ಸಂದರ್ಭದಲ್ಲಿ ನಾವು ಅಭಿನಂದಿಸುತ್ತೇವೆ ಎಂದು ಅಭಿಯಾನ ಸಂಘಟಕರು ಹೇಳಿದ್ದಾರೆ.