ರಾಜಸ್ಥಾನದ ಅಲ್ವಾರ್‌ನಲ್ಲಿ ಮತ್ತೋರ್ವ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ದೂರು ನೀಡದಂತೆ ಬೆದರಿಕೆ

0
723

ಸನ್ಮಾರ್ಗ ವಾರ್ತೆ

ಅಲ್ವಾರ್,ಮೇ.16: ಟೋಂಕ್ ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವು ರಾಜಸ್ಥಾನದಲ್ಲಿ ತಳಮಳ ಸೃಷ್ಟಿಸಿರುವಾಗ, ಮತ್ತೋರ್ವ ಅಪ್ರಾಪ್ತೆಯ ಮೇಲೆ ಅಲ್ವಾರ್‌ನಲ್ಲಿ ಮೂರು ಯುವಕರು ಹಲ್ಲೆ ನಡೆಸಿ ಅತ್ಯಾಚಾರವ್ಯಸಗಿದ್ದು, ಕೃತ್ಯವನ್ನು ಚಿತ್ರೀಕರಿಸಿ ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಿದ ಘಟನೆ‌ ನಡೆದಿದೆ.

ಮೇ 10 ರಂದು ಭಿವಾಡಿಯಲ್ಲಿ ಅಪರಾಧ ನಡೆದಿದೆ ಎಂಬುದನ್ನು ಅಧಿಕಾರಿಗಳು ದೃಢಪಡಿಸಿದ್ದರು. ಆದರೆ ಮೇ 13 ರಂದು ಪೊಲೀಸರು ದೂರು ದಾಖಲಿಸಿದ್ದಾರೆ ಎಂದು ಬಾಲಕಿಯ ತಂದೆ ಹೇಳಿದ್ದಾರೆ.

ಮೇ 10ರಂದು ಮಧ್ಯಾಹ್ನ ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯಾದ ಬಾಲಕಿಯು ತನ್ನ ಸಂಬಂಧಿಕರೋರ್ವರ ಮನೆಗೆ ತೆರಳುವಾಗ ಆಶ್ರಯ ಮನೆಯಲ್ಲಿದ್ದ ಮೂವರು ಯುವಕರು ಅಡ್ಡಗಟ್ಟಿ ಆಕೆಯನ್ನು ಬಲವಂತದಿಂದ ನಿರ್ಜನ ಕೋಣೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದರು. ಕೃತ್ಯವನ್ನು ಚಿತ್ರಿಕರಿಸಿ ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಒಡ್ಡಿದ್ದರು. ಆದರೆ, ಬಾಲಕಿಯು ಪೊಲೀಸರಿಗೆ ಈ ಕುರಿತು ದೂರು ನೀಡುವುದಾಗಿ ಪ್ರತಿಭಟಿಸಿದಾಗ ಆಕೆಯ ತಲೆಯನ್ನು ಗೋಡೆಗೆ ಜಜ್ಜಿದ್ದರೆಂದು ವರದಿಯಾಗಿದೆ.

ಇತ್ತ ಬಹಳ ಹೊತ್ತಾದರೂ ಮಗಳು ಮನೆಗೆ ಬಾರದಿರುವುದರಿಂದ ಚಿಂತಿತರಾಗಿದ್ದ ಆಕೆಯ ತಂದೆಯು ಬಾಲಕಿಗಾಗಿ ಹುಡುಕಾಟ ಆರಂಭಿಸಿದಾಗ ತಮ್ಮ ಮಗಳನ್ನು ಕ್ಲಿನಿಕ್‌ನಲ್ಲಿ ಅಡ್ಮಿಟ್ ಮಾಡಲಾಗಿದೆ ಎಂಬ ಫೋನ್ ಕರೆಯು ಬಂದಿತ್ತು. ತದನಂತರ ಬಾಲಕಿಯನ್ನು ಮನೆಗೆ ವಾಪಾಸು ಕರೆತರುವಾಗ ತನ್ನ ಮೇಲಾದ ಅತ್ಯಾಚಾರದ ಕುರಿತು ಆಕೆ ಕುಟುಂಬಕ್ಕೆ ತಿಳಿಸಿದ್ದಾಳೆ.

ಕೆಲವು ದಿನಗಳ ಹಿಂದ ಟೋಂಕ್‌ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಘಟನೆಯನ್ನು ರಾಷ್ಟೀಯ ಮಾನವ ಹಕ್ಕುಗಳ ಆಯೋಗವು ರಾಜ್ಯ ಸರಕಾರಕ್ಕೆ ನಿರ್ದೇಶನವನ್ನು ನೀಡುವ ಮೂಲಕ ಪ್ರಕರಣದಲ್ಲಿ ಆರೋಪಿಗಳನ್ನು ರಕ್ಷಿಸಲು ಓರ್ವ ವೈದ್ಯರು ಸೇರಿದಂತೆ ಇತರೆ ಅಧಿಕಾರಿಗಳು ಬಾಲಕಿಯ ವಯಸ್ಸು ಮತ್ತು ಚಾರಿತ್ರ್ಯದ ಮೇಲೆ ಪ್ರಶ್ನೆಮಾಡುತ್ತಿರುವುದು ಸರಿಯೇ ಎಂದು ಆಯೋಗವು ಪ್ರಶ್ನಿಸಿತ್ತು.