ಸನ್ಮಾರ್ಗ ವಾರ್ತೆ
ನ್ಯೂಯಾರ್ಕ್,ಜೂ.2: ಆಫ್ರೊ-ಅಮೆರಿಕನ್ ವಂಶೀಯ ಜಾಜ್ ಫ್ಲಾಡ್‌ನ ಕೊಲೆಯನ್ನು ವಿರೋಧಿಸಿ ಯುಎಸ್‍ನಲ್ಲಿ ಪ್ರತಿಭಟನೆ ಮುಂದುವರಿಯುತ್ತಿದ್ದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಪ್ರತಿಭಟನೆಕಾರರನ್ನು ರಾಜ್ಯಗಳು ನಿಯಂತ್ರಿಸದಿದ್ದರೆ ಸೇನೆಯನ್ನು ಇಳಿಸುವೆ ಎಂದು ಟ್ರಂಪ್ ಬೆದರಿಕೆ ಹಾಕಿದರು.
ಮೇಯರ್‌ಗಳು ಮತ್ತು ಗವರ್ನರ್‌ಗಳು ಕಾನೂನು ವ್ಯವಸ್ಥೆಯನ್ನು ಮರುಸ್ಥಾಪಿಸಿರಿ. ನಗರಗಳು, ಬೀದಿಗಳಿಗೆ ಅಗತ್ಯದಷ್ಟು ನ್ಯಾಶನಲ್ ಗಾರ್ಡ್‌ಗಳನ್ನು ನಿಯೋಜಿಸಿರಿ. ಇದಕ್ಕೆ ಗವರ್ನರ್‌ಗಳು ವಿಫಲರಾದರೆ ಸಾವಿರಾರು ಅಮೆರಿಕನ್ ಸೇನೆಯನ್ನು ಇಳಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಟ್ರಂಪ್ ಬೆದರಿಸಿದ್ದಾರೆ.
ನಮ್ಮದು ಜಗತ್ತಿನ ಮಹತ್ತಾದ ದೇಶ. ನಾವು ಅದನ್ನು ಭದ್ರವಾಗಿ ಕಾಯ್ದುಕೊಳ್ಳಬೆಕು. ನಾನು ನಿಮ್ಮ ಸಂರಕ್ಷಣೆಗಾಗಿ ಹೋರಾಡುವೆ. ನಾನು ನಿಮ್ಮ ಕಾನೂನು ವ್ಯವಸ್ಥೆಯ ಪಾಲಕ. ಶಾಂತವಾಗಿ ಪ್ರತಿಭಟಿಸುವವರ ಜೊತೆಗೂ ನಾನಿದ್ದೇನೆ ಎಂದು ಟ್ರಂಪ್ ಹೇಳಿದರು.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












