ಸನ್ಮಾರ್ಗ ವಾರ್ತೆ
ವಳಂಚೇರಿ,ಜೂ.2: ಮಲಪ್ಪುರಂ ವಳಂಚೇರಿಯಲ್ಲಿ ಸ್ಕೂಲ್ ವಿದ್ಯಾರ್ಥಿನಿ ಸುಟ್ಟಗಾಯಗಳೊಂದಿಗೆ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದು ಆನ್ಲೈನ್ ಕ್ಲಾಸ್ನಲ್ಲಿ ಭಾಗವಹಿಸಲು ಆಗದ್ದಕ್ಕೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಂದೆ-ತಾಯಿ ಹೇಳಿದ್ದಾರೆ.
ಹಣ ಇಲ್ಲದೆ ಕೆಟ್ಟು ಹೋದ ಟಿವಿ ಸರಿ ಮಾಡಲು ಆಗಿಲ್ಲ. ಸ್ಮಾರ್ಟ್ಫೋನ್ ಇಲ್ಲದ್ದರಿಂದ ತರಗತಿಯಲ್ಲಿ ಭಾಗವಹಿಸಲು ಆಗದ್ದರಿಂದ ಮಗಳು ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದಳು ಎಂದು ಹೆತ್ತವರು ಹೇಳಿದ್ದಾರೆ.
ನಿನ್ನೆ ಸಂಜೆ 5: 30ಕ್ಕೆ ಇರಿಂಬಳಯಂ ಗ್ರಾಮ ಪಂಚಾಯತ್ ತಿರುನಿಲಂ ಎಂಬಲ್ಲಿ ಬಾಲಕೃಷ್ಣಮ್- ಶೀಬಾ ದಂಪತಿಗಳ ಮಗಳು ದೇವಿಕಾ(14) ಜನವಾಸವಿಲ್ಲದ ಮನೆಯ ಮುಂದೆ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಳು. ಮಗಳು ನಾಪತ್ತೆಯಾಗಿದ್ದರಿಂದ ಅವಳಿಗಾಗಿ ಹುಡುಕಾಡಿದಾಗ ಸುಟ್ಟು ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.ಮೃತದೇಹದ ಪಕ್ಕದಲ್ಲಿ ಸೀಮೆಎಣ್ನೆ ಬಾಟ್ಲಿಯೂ ಸಿಕ್ಕಿದ್ದು, ಬಾಲಕಿ ಒಂಬತ್ತನೆ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












