ಈ ಅತಿಕ್ರಮಣಗಳ ಎದುರು ಕೊರೋನಾ ಸಣ್ಣದು

0
924

ಸನ್ಮಾರ್ಗ ವಾರ್ತೆ

ಅರಫಾ ಮಂಚಿ

ತಣ್ಣಗಿನ ವಾತಾವರಣ ಇದ್ದರೆ ಒಬ್ಬನಿಂದ 20 ಅಡಿ ದೂರದವರೆಗೆ ಕೊರೊನಾ ಹರಡ ಬಹುದು ಎಂದು ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯ ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಅಂತರ ಆರಡಿ ಸಾಲದು. ಈ ವೈರಸ್ ಉಷ್ಣತೆಯ ವಾತಾವರಣದಿಂದ ಮೂರುಪಟ್ಟು ಹೆಚ್ಚು ಶೀತ ವಾತಾವರಣದಲ್ಲಿ ಹರಡುತ್ತಿದೆಯಂತೆ. ಕೆಮ್ಮು ಬಂದಾಗ, ಸೀನಿದಾಗ 40,000 ಉಚ್ವಾಸ ಕಣಗಳು ಹೊರಗೆ ಬರುತ್ತವೆ. ಮಾತಾಡುವಾಗ ಕೆಲವೊಮ್ಮೆ ಇಷ್ಟೇ ಉಗುಳಿನ ಕಣಗಳು ಹೊರಗೆ ಬರುತ್ತವೆ.

ಕೊರೊನಾ ಜನಜೀವನವನ್ನು ಜನರು ಪರಸ್ಪರ ಹತ್ತಿರ ಬರದಷ್ಟು ಅತಿಕ್ರಮಿಸಿದೆ. ಅಮೆರಿಕದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಕೊರೊನಾ ಅತಿಕ್ರಮಿಸಿ ಮಣಿಸಿತು. ಅಂದರೆ ಬಲಿಪಡೆಯಿ ತೆಂದರ್ಥ. ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಅಮೆರಿಕದ ನಂತರ ಎರಡನೆ ಸ್ಥಾನದಲ್ಲಿ ಲ್ಯಾಟಿನ್ ಅಮೆರಿಕ ದೇಶÀ ಬ್ರಝಿಲ್ ಇದೆ. ಕೊರೊನಾದ ಎರಡನೇ ಹಂತದ ಅತಿಕ್ರಮಣವು ಲ್ಯಾಟಿನ್ ಅಮೆರಿಕ ದೇಶಗಳು ಎಂದು ವಿಶ್ವಾರೋಗ್ಯ ಸಂಘಟನೆ ಹೇಳುತ್ತಿದೆ. ಒಂದು ರೋಗ ಹೀಗೆ ಅತಿಕ್ರಮಿಸಿ ಜನರನ್ನು ಬಲಿಪಡೆಯ ಹೊರಟಿದ್ದರೆ ಅಧಿಕಾರದಾಹಿ ಮೇಲ್ಮೆಯನ್ನು ಬಿಂಬಿಸುವ ಜನಾಂಗ ದಾಹಿಗಳು ನಡೆಸಿದ ಅತಿಕ್ರಮಣಗಳು ಕಡಿಮೆಯದ್ದಲ್ಲ. ಅಮೆರಿಕ ಮತ್ತು ಇಸ್ರೇಲ್‍ಗಳು ಫೆಲಸ್ತೀನಿನಲ್ಲಿ ಕಳೆದ ಎಪ್ಪತ್ತು ವರ್ಷಗಳಿಂದ ಮಾಡಿದ ಅತಿಕ್ರಮಣ ಕಡಿಮೆಯದಲ್ಲ.

ವೆಸ್ಟ್‍ಬ್ಯಾಂಕಿನಲ್ಲಿರುವ ಫೆಲಸ್ತೀನ್‍ನ ಭೂಮಿ ಯಲ್ಲಿನ ಹೆಚ್ಚಿನ ಭಾಗ ಇಸ್ರೇಲ್ ಅತಿಕ್ರಮಿಸಿ ವಶಪಡಿಸುತ್ತಿದೆ. ಅಲ್ಲಿರುವ ಫೆಲಸ್ತೀನಿಯರನ್ನು ಬಲವಂತದಿಂದ ಒಕ್ಕಲೆಬ್ಬಿಸಿ ಬಡಿದೋಡಿಸುತ್ತಿದೆ. ಇದಕ್ಕಿಂತ ಹೆಚ್ಚಿನ ಅತಿಕ್ರಮಣವನ್ನು ಕೊರೊನಾ ಮಾಡಿದೆಯಾ?

ರಮಲ್ಲಾ ಸಮೀಪ ದೆರ್ ದ್ವಬ್‍ವಾನ್‍ನಲ್ಲಿ ಯಹೂದಿ ವಲಸಿಗರು ಒತ್ತುವರಿ ಮಾಡುವುದನ್ನು ಹೆಚ್ಚಿಸಿದ್ದಾರೆ. ಇಲ್ಲಿ ವಲಸಿಗರ ಅತಿಕ್ರಮಕ್ಕೆ ಇಸ್ರೇಲ್ ಸೈನ್ಯ ರಕ್ಷಣೆ, ಬೆಂಬಲ ನೀಡುತ್ತಿದೆ. ಸುಮಾರು 47 ದದುನಾಮ ಜಮೀನನ್ನು ಯಹೂದಿಯರು ಅನಧಿಕೃತವಾಗಿ ವಶದಲ್ಲಿರಿಸಿ ಕೊಂಡಿದ್ದಾರೆ. ದದ್ವೀಬ್‍ವಾನ್ ಮುನ್ಸಿಪಾಲಿಟಿಯ ಮುಖ್ಯಸ್ಥ ಮನ್ಸೂರ್ ಮನ್ಸೂರ್ ಈ ವಿವರವನ್ನು ನೀಡಿದ್ದು ವಫಾ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಫೆಲಸ್ತೀನಿಯರ ಆಸ್ತಿಯನ್ನು ನಾಶಪಡಿ ಸಲು ಬುಲ್‍ಡೋಝರ್ ಉಪಯೋಗಿಸಿ ಕೆಡವಿದ್ದ ಬಳಿಕ ಇಲ್ಲಿ ಅಕ್ರಮ ವಲಸಿಗರಿಗೆ ಮನೆ ಕಟ್ಟು ತ್ತಿರುವುದು ವರದಿಯಾಗಿದೆ. ವೆಸ್ಟ್‍ಬ್ಯಾಂಕ್ ಅತಿಕ್ರಮಣಕ್ಕೆ ಅನುಮತಿ ಕೊಡುವುದಾಗಿ ಅಮೆರಿಕ ಹೇಳಿತ್ತು. ನಂತರ ಇಸ್ರೇಲ್ ತನ್ನ ಯೋಜನೆ ಯೊಂದಿಗೆ ವೆಸ್ಟ್ ಬ್ಯಾಂಕನ್ನು ಅತಿಕ್ರಮಿಸುವ ಅಕ್ರಮಕ್ಕಿಳಿದಿದೆ.

ಕೊರೊನಾ ಅಮೆರಿಕವನ್ನು ಅತಿಕ್ರಮಿಸಿ ಮುಂದೆ ಮುಂದೆ ಸಾಗುತ್ತಿರುವಾಗ ಅಮೆರಿಕ ಇಸ್ರೇಲಿನ ಅತಿಕ್ರಮಣಕ್ಕೆ ಒತ್ತು ನೀಡುವ ಕೆಲಸ ಮಾಡುತ್ತಿರುವುದು ಸಾವುಗಳ ಕುರಿತು ಅದಕ್ಕಿನ್ನೂ ಪಶ್ಚಾತ್ತಾಪ ಇಲ್ಲ ಅನ್ನುವ ಕಥೆಯನ್ನೇ ಹೇಳುತ್ತಿದೆ. ಮನುಷ್ಯ ಎಷ್ಟು ಕ್ರೂರಿ? ಅಮೆರಿಕದ್ದು ಎಂತಹ ಕ್ರೂರ ವಿಚಾರ? ಅಂದರೆ ತನಗೆ ಇಷ್ಟವಿಲ್ಲದ್ದು ಮತ್ತು ಇತರರ ವಿರುದ್ಧ ಮಾಡವುದೆಲ್ಲವೂ ಅತಿಕ್ರಮಣವೇ. ಇಷ್ಟವಿಲ್ಲದ್ದನ್ನು ಕ್ಷಣ ಮಾತ್ರದಲ್ಲಿ ವಿರೋಧಿಸುವ ಡೊನಾಲ್ಡ್ ಟ್ರಂಪ್‍ಗೆ ಇಷ್ಟವಾಗಿ ದೆಯೋ ಇಲ್ಲವೋ ಅಮೆರಿಕ ಮಾತ್ರವಲ್ಲ ಜಗತ್ತನ್ನೇ ಕೊವಿಡ್ 19 ಅತಿಕ್ರಮಿಸುತ್ತಿದೆ. ಇಂದು ಫೆಲಸ್ತೀನಿಯರ ಮೇಲೆ ಬುಲ್‍ಡೋಝರ್ ಓಡಿಸುವ ಇಸ್ರೇಲ್‍ಗೆ ಒತ್ತಾಶೆಯಾದ ಟ್ರಂಪ್ ಕೊರೊನಾರ ಮುಂದೆ ಕೈಲಾಗದ ದುರ್ಬಲರು.

ತನಗೆ ಬೇಕಾದ್ದೇ ಆಗಬೇಕು, ವಿರೋಧ ಧ್ವನಿಯೆದ್ದರೆ ಬೆದರಿಸಿ ಸದ್ದಗಡಿಗಿಸುವ ದುಷ್ಟರ ತಂತ್ರಗಳನ್ನು ಹೆಚ್ಚಿನ ಆಧುನಿಕ ಆಳರಸರು ಮಾಡುತ್ತಾ ಬಂದಿದ್ದಾರೆ. ಸೌದಿ ಅರೇಬಿಯ ಮಿತ್ರರನ್ನು ಸೇರಿಸಿಕೊಂಡು ಯಮನ್‍ನಲ್ಲಿ ತಾನು ಹೇಳುವವರನ್ನು ಅಲ್ಲಿನ ಜನರು ಬಯಸುವುದಿಲ್ಲ ಎಂಬ ಕಾರಣಕ್ಕೆ ಯುದ್ಧಕ್ಕೆ ನಿಂತಿದೆ. ಒಂದರ್ಥ ದಲ್ಲಿ ಸೌದಿ ಮುಂದಾಳುತ್ವದ ಅತಿಕ್ರಮಣ ಇದು. ಅಲ್ಲಿನ ಹೂಥಿಗಳು ತಮ್ಮ ಮೇಲೆ ನಡೆಯುವ ಅತಿಕ್ರಮಣ ದಬ್ಬಾಳಿಕೆಯನ್ನು ವಿರೋಧಿಸಿ ಶಸ್ತ್ರ ಎತ್ತಿದರು. ಸಾವಿರಾರು ಜನರು ಈ ಮೇಲ್ಮೆಯ ಪ್ರತಿಪಾದನೆಯಡಿಗೆ ಬಿದ್ದು ಸತ್ತರು. ಬಾಂಬಿಂಗ್‍ಗೆ ಸಿಕ್ಕಿ ಕಟ್ಟಡಗಳು ಧರಾಶಾಹಿಯಾದವು. ಲಕ್ಷಾಂತರ ಮಂದಿ ಗಾಯಗೊಂಡರು. ಆ ನಾಡನ್ನು ಹಸಿವು ಅತಿಕ್ರಮಿಸಿತು. ಕೊರೊನಾವೂ ಬಾಧಿಸಿತು. ಸೌದಿ ಅರೇಬಿಯ ಕೊರೊನಾ ಹಾವಳಿಯಿಂದ ತತ್ತರಿಸುತ್ತಿದೆ. ಮೌಲ್ಯಗಳನ್ನು ಮೂಲೆಗೆಸೆದು, ನ್ಯಾಯ ನೀತಿಯನ್ನು ಮರೆಯಬಹುದೇ ಎಂಬ ಪ್ರಶ್ನೆಯನ್ನು ತನ್ನ ಅತಿಕ್ರಮಣದ ಮೂಲಕ ಕೊರೊನಾ ಪ್ರಶ್ನಿಸುತ್ತಿದೆ.

ಅಮೆರಿಕದಲ್ಲಿ ಆಫ್ರಿಕ ಮೂಲದ ವ್ಯಕ್ತಿಯ ಕೊರಳಿಗೆ ಮೊಣಕಾಲಿನಿಂದ ತಿವಿದು ಉಸಿರು ಗಟ್ಟಿಸಿ ಕೊಲೆ ಮಾಡುವ ಮೂಲಕ ಬಿಳಿಯ ಮಾನವೀಯತೆಯ ಮೇಲೆ ಅತಿಕ್ರಮಣ ನಡೆಸಿದರು. ಜನಾಂಗೀಯ ಅತಿಕ್ರಮಣ ಅಮೆರಿಕದ ಮಿನಿಯದಲ್ಲಿ ಪೋಲೀಸರು ನಡೆದಿದ್ದು ಘಟನೆಗೆ ಸಂಬಂಧಿಸಿದ ನಾಲ್ವರು ಪೊಲೀಸರನ್ನು ಅಲ್ಲಿನ ಮೇಯರ್ ಕೆಲಸದಿಂದ ತೆಗೆದುಹಾಕಿದ್ದಾರೆ. ಇಲ್ಲಿಯೂ ಮೇಲ್ಮೆಯ ವಾದದ್ದೇ ಮೇಲುಗೈ. ಸತ್ತವ ಆಪ್ರೋ ಅಮೆರಿಕನ್ ವ್ಯಕ್ತಿ. ಬಿಳಿಯ ಅಮೆರಿಕನ್ನರಿಗೆ ಈತ ಕೀಳ್ಮಟ್ಟದ ವ್ಯಕ್ತಿ. ಈ ಭಾವನೆಯೇ ಮನುಷ್ಯ ಸಂಕುಲದ ಮೇಲೆ ಕೆಲವರು ನಡೆಸುವ ಅತಿಕ್ರಮಣಕಾರಿ ನಿಬಂಧನೆ ಯಾಗಿದೆ. ಈಗ ಅಲ್ಲಿ ಜನರು ಘಟನೆಯ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಪೊಲೀಸಧಿಕಾರಿಗಳ ಮನೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಜನಾಂಗೀಯ ದಾಳಿಯನ್ನು ಸನ್ಮಸ್ಸು ಹೊಂದಿದವರು ಎಷ್ಟೇ ವಿರೋಧಿಸಿದರೂ ಇಂತಹದು ಮುಂದುವರಿಯುತ್ತಲೇ ಇದೆ. ಆದರೆ ಸಮಾಧಾನದ ವಿಚಾರವೆಂದರೆ ಜನಾಂಗೀಯವಾದಿ ಯಂತೆ ಕಾಣುತ್ತಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್ ಘಟನೆಯನ್ನು ಎಫ್‍ಬಿಐ ಮತ್ತು ಜಸ್ಟಿಸ್ ಡಿಪಾರ್ಟ್‍ಮೆಂಟ್ ಮೂಲಕ ತನಿಖಿಸುವುದಾಗಿ ಘೋಷಿಸಿದ್ದೆನ್ನಬಹುದು.

ಒಂದು ಕಡೆ ಫೆಲಸ್ತೀನಿಯರ ಮೇಲೆ ಇಸ್ರೇಲಿನ ಅತಿಕ್ರಮಣವನ್ನು ಬೆಂಬಲಿಸಿ, ಇನ್ನೊಂದು ಕಡೆ ಸೌದಿ ಅರೇಬಿಯ ಯಮನ್‍ನ ಮೇಲೆ ನಡೆಸುವ ಅತಿಕ್ರಮಣಕ್ಕೆ ಉತ್ತೇಜನ ನೀಡಿ, ಇನ್ನೊಂದು ಕಡೆ ಸಿರಿಯಾದಲ್ಲಿ ನಡೆಯುವ ಅಧ್ಯಕ್ಷ ಬಸರುಲ್ ಅಸದ್ ಮತ್ತು ರಷ್ಯ ನಡೆಸು ತ್ತಿರುವ ದಮನಕಾರಿ ಯುದ್ಧವನ್ನು ವಿರೋಧಿಸುವ ಟ್ರಂಪ್‍ರ ನಡೆ ವಿಚಿತ್ರವಾದರೂ ರಾಜಕೀಯ ಲಾಭದ್ದು. ಆದರೆ ಈ ಯಾವ ಲಾಭ ವನ್ನೂ ನೋಡದೆ ಕೊರೊನಾ ಧಾವಂತ ದಲ್ಲಿದೆ. ಅಮೆರಿಕದಲ್ಲಿ ಒಂದು ಲಕ್ಷದಷ್ಟು ಜ ನರು ಈಗಾಗಲೇ ಕೊರೊನಾಕ್ಕೆ ಬಲಿಯಾಗಿದ್ದಾರೆ.

ಈವತ್ತು ಜಗತ್ತು ಪ್ರಕ್ಷುಬ್ಧವಾಗಿದೆ. ಕೊರೊನವನ್ನು ದೂರಿ ಪ್ರಯೋಜನ ವಿಲ್ಲ. ಅದು ಇತ್ತೀಚಿನದು. ಅದಕ್ಕಿಂತ ಮೊದಲೇ ಆಳುವವರ ರಾಜಕೀಯ ದಾಹದಿಂದಾಗಿ ಜಗತ್ತು ಪ್ರಕ್ಷುಬ್ಧವಾಗಿತ್ತು. ಯುದ್ಧಗಳು, ಕಂಪೆನಿಗಳ, ಉದ್ಯಮಿಗಳ ವ್ಯಾಪಾರಿ ಬುದ್ಧಿ ಜಲ ನೆಲ ವಾಯು ಗಳನ್ನೆಲ್ಲ ಅತಿಕ್ರಮಿಸಿ ತಮ್ಮಲ್ಲಿನ ಕಲುಷಿತ ವಾಗಿದ್ದನ್ನೆಲ್ಲ ಸೇರಿಸಿವೆ. ಶುದ್ಧಗಾಳಿ, ನೀರು, ಮಣ್ಣು ಎಲ್ಲದ್ದರ ಮೇಲೆ ಅತಿ ಕ್ರಮಣವಾಗಿರುವಾಗ ಎಲ್ಲರಿಗೂ ಸವಾಲಾಗುವಂತೆ ಕೊರೊನಾ ಅತಿಕ್ರಮಿ ಸುತ್ತಲೇ ಇದೆ. ಹೀಗೆ ಎಲ್ಲ ರೀತಿ ಯಿಂದಲೂ ಈ ಭೂಮಿ ಮಾನವಕೃತ ದುರ್ವರ್ತನೆಗಳಿಂದ ಪ್ರಕ್ಷುಬದ್ಧವಾಗಿದೆ.

ಇಂದು ಭಾರತದಲ್ಲಿ ಒಂದೂವರೆ ಲಕ್ಷ ಕೊರೊನಾ ಪೀಡಿತರು. ಅಮೆರಿಕ ದಲ್ಲಿ ಕೊರೊನಾಕ್ಕೆ ಒಂದು ಲಕ್ಷ ಸಾವು ಗಳು. ಮುಂದೆ ಲ್ಯಾಟಿನ್ ಅಮೆರಿಕ ಕೊರೊನಾದ ಯುದ್ಧರಂಗವಾಗಲಿದೆ ಎಂಬ ಎಚ್ಚರಿಕೆಗಳು ಇವೆಲ್ಲ ಏನು ಹೇಳುತ್ತಿದೆ? ಢೋಂಗಿ ಭಕ್ತಿ ಪ್ರತಿಪಾದ ಕರಿಗೆ ಈ ರಕ್ತದಾಹಿಗಳಿಗೆ, ರಾಜಕೀಯ ದಾಹಿಗಳಿಗೆ, ಮೇಲ್ಮೆಯ ಮೇಲಾಟಿಗ ರಿಗೆ, ಬಂಡವಾಳಶಾಹಿಗಳಿಗೆ ಕೊರೊನಾ ಬಿಸಿತಟ್ಟಿಸಿಲ್ಲವೆಂದರೆ… ಜಗತ್ತು ತನ್ನ ಕೊನೆಯ ಚರಣಕ್ಕೆ ಸಾಗುತ್ತಿದೆಯೇ? ಹಾಗೆ ಒಂದುವೇಳೆ ನಡೆಯುವುದಿದ್ದರೆ ಕೊರೊನ ಒಂದೇ ಸಾಕು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಬೆಂಬಲಿಸುವ ಮೂಲಕ ನಮ್ಮನ್ನು ಬೆಂಬಲಿಸಿ.