ಅಲ್ಲಾಹನನ್ನು ನೋಡಬೇಕೆಂದು ಹೇಳುವ ಮಗುವಿನೊಂದಿಗೆ ಏನು ಹೇಳಬೇಕು?

0
735

ಸನ್ಮಾರ್ಗ ವಾರ್ತೆ

ಜಾಸಿಮುಲ್ ಮುತವ್ವ

ನಾಲ್ಕು ವರ್ಷ ಪ್ರಾಯದ ಮಗ ತಾನು ರಚಿಸಿದ ಚಿತ್ರವನ್ನು ಹಿಡಿದುಕೊಂಡು ಬಹಳ ಸಂತೋಷದಿಂದ ತಾಯಿ ಬಳಿ ಹೋದನು, ತಾಯಿ ಅವನನ್ನು ಕರೆದು “ನೀನು ಯಾವ ಚಿತ್ರ ಬಿಡಿಸಿದ್ದಿ” ಎಂದು ಪ್ರಶ್ನಿಸಿದಳು. ಆಗ ಆ ಮಗು, ನಾನು ಅಲ್ಲಾಹನ ಚಿತ್ರ ಬಿಡಿಸಿದ್ದೇನೆಂದು ಉತ್ತರಿಸುತ್ತದೆ. ಆಗ ತಾಯಿ ಈ ಮಗುವಿಗೆ ಉತ್ತರಿಸಲು ಚಡಪಡಿಸುತ್ತಾಳೆ. ಸುಮ್ಮನಾಗುತ್ತಾಳೆ. ಆಗ ಮಗು ನನಗೆ ಯಾರೆಲ್ಲಾ ಇಷ್ಟವೋ ಅವರ ಚಿತ್ರವನ್ನು ಬಿಡಿಸುತ್ತೇನೆ. ನನಗೆ ಅಲ್ಲಾಹ್ ಎಂದರೆ ತುಂಬಾ ಇಷ್ಟ. ಆದ್ದರಿಂದ ಅಲ್ಲಾಹನ ಚಿತ್ರ ಬಿಡಿಸಿದೆ ಎನ್ನುತ್ತದೆ. ಇಂತಹ ಸಂದರ್ಭಗಳಲ್ಲಿ ಪುಟ್ಟ ಮಗುವಿನೊಂದಿಗೆ ಹೇಗೆ ವರ್ತಿಸಬೇಕು ಎಂಬ ಬಗ್ಗೆ ಕೇಳಲು ಆ ತಾಯಿ ನನ್ನ ಬಳಿ ಬಂದಿದ್ದರು. ಆ ತಾಯಿ ಮುಂದುವರಿಯುತ್ತಾ ನಾನು ಅವನಲ್ಲಿ “ನೋಡಿ ನಮ್ಮ ಕಣ್ಣಿಗೆ ಕಾಣುವ ವಸ್ತುಗಳ ಚಿತ್ರಗಳನ್ನು ಮಾತ್ರ ಬಿಡಿಸಿದರೆ ಸಾಕು. ನಮ್ಮ ಕಣ್ಣಿಗೆ ಕಾಣದಂತಹ ವಸ್ತುಗಳ ಚಿತ್ರ ಬಿಡಿಸುವುದು ಸರಿಯಲ್ಲ. ಯಾಕೆಂದರೆ ಅದರ ರೂಪ ಹೇಗಿದೆ ಎಂದು ನಮಗೆ ತಿಳಿದಿಲ್ಲವಲ್ಲ? ಎಂದು ಹೇಳಿ ಅವನು ರಚಿಸಿದ ಚಿತ್ರದ ಕಾಗದವನ್ನು ಪಡೆದು ಆಟದ ವಸ್ತುಗಳನ್ನು ಅವನ ಕೈಗೆ ನೀಡಿದೆ. ಬಳಿಕ ಆ ಚಿತ್ರವನ್ನು ಹರಿದು ಹಾಕಿದೆ” ಎಂದು ಹೇಳಿದರು. ನಾನು ಅವರೊಂದಿಗೆ ನೀವು ಸರಿಯಾದ ಕೆಲಸ ಮಾಡಿದ್ದೀರಿ ಎಂದು ಹೇಳಿದೆ. ಯಾಕೆಂದರೆ ನೀವು ಆ ವಿಷಯವನ್ನು ಚೆನ್ನಾಗಿ ಗ್ರಹಿಸಿಕೊಂಡು ಮಗುವಿಗೆ ಅರ್ಥೈಸಿದಿರಿ. ನಂತರ ಅವನ ಗಮನವು ಇನ್ನೊಂದು ವಸ್ತುವಿನತ್ತ ಹರಿಯುವಂತೆ ಮಾಡಿದಿರಿ. ಈ ಘಟನೆಯನ್ನು ನೀವು ನಿಭಾಯಿ ಸಿದ ಶೈಲಿ ಬಹಳ ಉತ್ತಮ ರೀತಿಯಲ್ಲಾಗಿದೆ. ನೀವು ಕೈಗೊಂಡ ಮೂರು ನಿರ್ಧಾರಗಳು ಉತ್ತಮವಾಗಿತ್ತು.

ಆದರೆ ಆ ಮಗು ಯಾಕಾಗಿ ಆ ಚಿತ್ರವನ್ನೇ ಬಿಡಿಸಿತು ಎಂಬ ಕುರಿತು ನಾನು ನಿಮ್ಮಲ್ಲಿ ಕೇಳುತ್ತಿದ್ದೇನೆ ಎಂದು ಆ ತಾಯಿ ಕೇಳಿದಾಗ, “ಅದಕ್ಕೆ ಕಾರಣವನ್ನು ಅವನೇನು ಹೇಳಿಲ್ಲವಲ್ಲ. ಅವನು ಯಾವುದನ್ನೆಲ್ಲಾ ಇಷ್ಟಪಡುತ್ತಾನೋ ಅವನ್ನೆಲ್ಲಾ ಚಿತ್ರ ಬಿಡಿಸುತ್ತಾನೆ. ಆತ ಸರಿ ಯಾವುದು ತಪ್ಪು ಯಾವುದು ಎಂದು ಅರಿಯದ ಮುಗ್ಧ ಬಾಲಕ. ಈ ಪ್ರಾಯದಲ್ಲಿ ಮಕ್ಕಳ ಭಾವನೆ ವಿಶಾಲವಾಗಿರುತ್ತದೆ. ಅವನು ವಸ್ತುಗಳ ಜೊತೆ ಮಾತನಾಡುವುದನ್ನು ನೀವು ಗಮನಿಸಿರಬಹುದು. ಆದ್ದರಿಂದ ಆತ ಅಲ್ಲಾಹನ ಬಗ್ಗೆ ಉತ್ತಮ ಧಾರಣೆಯನ್ನು ಇರಿಸಿರಬಹುದು. ಅದಕ್ಕೊಂದು ರೂಪ ನೀಡಿ ಅವನು ಚಿತ್ರ ಬಿಡಿಸಿರಬಹುದು.

ಆಗ ಆ ತಾಯಿ “ಅವನು ಬಿಡಿಸಿದ ಚಿತ್ರ ಮನುಷ್ಯ ರೂಪವನ್ನು ಹೋಲುತ್ತಿತ್ತು” ಎಂದು ಹೇಳಿತು. ಆಗ ನಾನು “ಅದು ಸಹಜವಲ್ಲವೇ. ಯಾಕೆಂದರೆ ಮಗು ಕೂಡಾ ಮನುಷ್ಯನಲ್ಲವೇ? ಅದೇ ರೂಪದಲ್ಲಿ ಆತ ಅಲ್ಲಾಹನನ್ನು ಕೂಡಾ ಭಾವಿಸಿದ್ದ. ಇನ್ನು ಅಲ್ಲಾಹನ ಮಹಿಮೆಯ ಬಗೆಗಿನ ಶಿಕ್ಷಣವನ್ನು ಆ ಮಗುವಿಗೆ ನಾವು ನೀಡಬೇಕು. ಆಲ್ಲಾಹನು ಪ್ರಬಲನು. ಸೃಷ್ಟಿಕರ್ತ ಸಂರಕ್ಷಕ ಪರಿಪಾಲಕ. ಹೀಗೇ ಅಲ್ಲಾಹನ ಗುಣವಿಶೇಷತೆಗಳನ್ನು ಮಗುವಿಗೆ ಕಲಿಸಿಕೊಡಬೇಕು. ಅಲ್ಲಾಹನು ಸೃಷ್ಟಿಯಲ್ಲ. ಸೃಷ್ಟಿಯಲ್ಲಿ ಯಾವುದೂ ಅವನಿಗೆ ಸರಿಸಮವಾಗದು. ಆದ್ದರಿಂದ ಅಲ್ಲಾಹನ ಚಿತ್ರ ಬಿಡಿಸಬಾರದು, ಮನದಲ್ಲಿ ಯಾವುದೇ ರೂಪ ನೀಡಬಾರದು ಎಂಬುದನ್ನು ಮಗು ಅರ್ಥೈಸುತ್ತದೆ.

ಮಕ್ಕಳು ನಮ್ಮ ಮನದಲ್ಲಿ ತುಂಬಿದ ಭಾವನೆ ಪ್ರಕಟಿಸುವ ಮಾಧ್ಯಮವಾಗಿದ್ದಾರೆ. ಮಕ್ಕಳು ತಮ್ಮ ತಾಯಿಯ ಚಿತ್ರ ಬಿಡಿಸುವಾಗ ಅವಳ ಕೈಯನ್ನು ದೊಡ್ಡದಾಗಿ ಬಿಡಿಸಿದರೆ ಆ ತಾಯಿ ಅವರಿಗೆ ಹೆಚ್ಚಾಗಿ ಹೊಡೆಯುತ್ತಿರಬಹುದು ಎಂದು ಗಮನಿಸಬಹುದು. ಮಕ್ಕಳ ಭಾವನೆ ಗನುಗುಣವಾಗಿ ಅವರು ರಚಿಸುವ ಚಿತ್ರಗಳಲ್ಲಿ ಅತಿಶಯೋಕ್ತಿಗಳಿರಬಹುದು. ಸಾಮಾನ್ಯವಾಗಿ ಮಕ್ಕಳು ತಮ್ಮನ್ನು ಹೆಚ್ಚು ಆಕರ್ಷಿಸುವ ಗಂಭೀರ ವಾಗಿ ಗಮನಿಸುವ ವಸ್ತುಗಳ ಚಿತ್ರಗಳನ್ನು ಬಿಡಿಸುತ್ತಾರೆ. ಅದಕ್ಕೆ ಸಾಮಾನ್ಯವಾಗಿ ಕಾರಣಗಳೂ ಅವರ ಬಳಿಯಲ್ಲಿರುತ್ತದೆ. ಅವರು ಈ ಜಗತ್ತಿನ ಬಗ್ಗೆ ಅರಿಯಲು ಕಾತರರಾಗಿರುತ್ತಾರೆ. ಅದಕ್ಕಾಗಿ ಅವರು ಎಲ್ಲವನ್ನೂ ಯಾಕಾಗಿ ಯಾಕೆ ಎಂಬ ಪ್ರಶ್ನೆಗಳನ್ನು ಕೇಳುತ್ತಾ ಇರುತ್ತಾರೆ. ನಾವು ಅವರ ಪ್ರಶ್ನೆಗಳಿಗೆ ಉತ್ತರ ನೀಡಲೇಬೇಕು. ಒಂದು ದಿನ ದಲ್ಲಿ ಪರಿಚಯಪಡಲು ಸುಮಾರು ಮುನ್ನೂರಕ್ಕಿಂತಲೂ ಅಧಿಕ ಪ್ರಶ್ನೆಗಳನ್ನು ಕೇಳಬಹುದು. ನಾವು ಮಾತ್ರ ಅವರಿಗೆ ಕಡ್ಡಾಯವಾಗಿ ಉತ್ತರಿಸಬೇಕು. ಯಾಕೆಂದರೆ ಅವರಿಗೆ ಕಲಿಕೆಯ ಜ್ಞಾನದ ವಾಹಕರನ್ನಾಗಿ ನಮ್ಮನ್ನು ಅವರು ಬಳಸಿಕೊಂಡಿರುತ್ತಾರೆ, ಅದರ ಹೆಸರಲ್ಲಿ ಅವರನ್ನು ಗದರಿಸಿ ಸುಮ್ಮನಾಗಿಸುವುದು ಸರಿಯಲ್ಲ. ಅವರು ಜ್ಞಾನ ಗಳಿಸಲು ಹಾತೊರೆಯುತ್ತಿದ್ದಾರೆ.

ಆದ್ದರಿಂದ ಆ ತಾಯಿ ತನ್ನ ಮಗುವನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿತು. ಅಲ್ಲಾಹನ ಚಿತ್ರ ಬಿಡಿಸಿದ ಕೂಡಲೇ ಕೋಪದಿಂದ ಕಸಿದು ಕೊಂಡು ಗದರಿಸಲಿಲ್ಲ. ಬದಲಾಗಿ ಆ ಬಗ್ಗೆ ಅವನಿಗೆ ಅರ್ಥ ಮಾಡಿ ಕೊಡುವಲ್ಲಿಯೂ ಯಶಸ್ವಿಯಾದಳು. ಅಲ್ಲಾಹನನು ನಮಗೆ ಯಾಕೆ ನೋಡಲು ಆಗುವುದಿಲ್ಲ ಎಂದು ಮಗು ಪ್ರಶ್ನಿಸಿದ ಕೂಡಲೇ ಕೋಪಗೊಂಡು ಗದರಿಸುವುದಲ್ಲ. ಅದಕ್ಕೆ ಸರಿಯಾದ ರೀತಿಯಲ್ಲಿ ಉತ್ತರಿಸುವುದಾಗಿದೆ. ಅದು ಜ್ಞಾನ ಗಳಿಸುವ ಮಾಧ್ಯಮವಾಗಿದೆ. ಪ್ರವಾದಿ ಮೂಸಾ(ಅ)ರವರು ಅಲ್ಲಾಹನಲ್ಲಿ ಕೇಳಿದ ಪ್ರಶ್ನೆಯನ್ನು ನಮಗೆ
ಕುರ್‍ಆನಿನಲ್ಲಿ ಕಾಣಬಹುದು. ಒಂದು ನಿರ್ದಿಷ್ಟ ಅವಧಿಯಲ್ಲಿ ಮೂಸಾ ಅಲ್ಲಿಗೆ ಬಂದಾಗ ಅಲ್ಲಾಹನು ಅವರೊಂದಿಗೆ ಸಂಭಾಷಣೆ ನಡೆಸಿದಾಗ “ನನ್ನ ಒಡೆಯಾ! ನೀನು ನನ್ನ ಮುಂದೆ ನಿನ್ನ ಮಾತುಗಳನ್ನು ಉಚ್ಚರಿಸಿದರೂ ನಾನು ನಿನ್ನನ್ನು ಪ್ರತ್ಯಕ್ಷ ರೂಪದಲ್ಲಿ ನೋಡ ಬಯಸುವೆ.” ಆಗ ಅಲ್ಲಾಹನು ಹೇಳಿದನು, “ನಿನಗೆ ನನ್ನನ್ನು ನೋಡಲಾಗದು. ಆದರೂ ನಿನ್ನ ಮುಂದೆ ಇರುವಂತಹ ಪರ್ವತದತ್ತ ದೃಷ್ಟಿ ಹಾಯಿಸು. ಅದು ಅಲ್ಲಿಯೇ ತನ್ನ ಸ್ವಸ್ತಾನದಲ್ಲಿ ಇದ್ದರೆ ನಿನಗೆ ನನ್ನನ್ನು ಕಾಣಬಹುದು.” ಅಲ್ಲಾಹನನ್ನು ನೋಡಬೇಕು ಎಂದು ಮಗು ಹೇಳಿದರೆ ಆ ಮಗುವಿನಲ್ಲಿ ಹೀಗೆ ಹೇಳಬಹುದು. “ಈ ಲೋಕದಲ್ಲಿ ನಮಗೆ ಅಲ್ಲಾಹನನ್ನು ಕಾಣಲು ಸಾಧ್ಯವಾಗದು. ಆದರೆ ನಾಳೆ ಸ್ವರ್ಗದಲ್ಲಿ ಅವನನ್ನು ಕಾಣಬಹುದು. ಇನ್ಶಾ ಅಲ್ಲಾಹ್. ಆದರೆ ಅಲ್ಲಾಹನು ಈ ಜಗತ್ತಿನಲ್ಲಿ ಅವನ ಸೃಷ್ಟಿಗಳನ್ನು ನೋಡುವ ಸೌಭಾಗ್ಯ ಕ ಲ್ಪಿಸಿದ್ದಾನೆ. ಆಕಾಶ, ಭೂಮಿ, ಸಸ್ಯ, ಕಡಲು ಮುಂತಾದುವುಗಳನ್ನು ನಮಗೆ ನೋಡಬಹದು. ಆ ಮೂಲಕ ದೇವನ ಮಹಿಮೆಯ ದೃಷ್ಟಾಂತಗಳ ಬಗ್ಗೆ ಯೋಚಿಸುವವರನ್ನಾಗಿ ಮಕ್ಕಳನ್ನು ಮಾಡಬಹುದು. ಇನ್ನು ಸ್ವಲ್ಪ ದೊಡ್ಡ ಮಕ್ಕಳು ಎಂದಾದರೆ ಇನ್ನೂ ಕೆಲವು ವಿಚಾರಗಳನ್ನು ಅವನಿಗೆ ಮನವರಿಕೆ ಮಾಡಿ ಕೊಡಬಹುದು. ಹಸಿವು ಪ್ರೀತಿ ಮುಂತಾದವುಗಳನ್ನು ನೀನು ಅನುಭವಿಸುತ್ತಿದ್ದಿ. ಆದರೆ ಅದನ್ನು ನಿನಗೆ ನೋಡಲಾಗುತ್ತದೆಯೇ? ಆದರೆ ಅದರ ಗುಣ ಲಕ್ಷಣಗಳನ್ನು ಅರ್ಥೈಸಬಹುದು. ಹಾಗೆಯೇ ಈ ಲೋಕದಲ್ಲಿ ಅಲ್ಲಾಹನು ಅವನ ಕೆಲವು ದೃಷ್ಟಾಂತಗಳನ್ನು ಸೃಷ್ಟಿಗಳನ್ನೂ ನಮಗೆ ತೋರಿಸಿಕೊಡುತ್ತಾನೆ. ಪರಲೋಕದಲ್ಲಿ ಅಂತಿಮ ದಿನದಂದು ನಮಗೆ ಅವನನ್ನು ಕಾಣಬಹುದು. ಇನ್ಶಾ ಅಲ್ಲಾಹ್.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಬೆಂಬಲಿಸುವ ಮೂಲಕ ನಮ್ಮನ್ನು ಬೆಂಬಲಿಸಿ.