ತಮಿಳ್ನಾಡಿನಲ್ಲಿ ಕೊರೋನಕ್ಕೆ ಶಾಸಕ ಬಲಿ

0
541

ಸನ್ಮಾರ್ಗ ವಾರ್ತೆ

ಚೆನ್ನೈ,ಜೂ.10:ತಮಿಳ್ನಾಡಿನಲ್ಲಿ ಕೊರೋನಕ್ಕೆ ಶಾಸಕರೊಬ್ಬರು ಬಲಿಯಾಗಿದ್ದು ಡಿಎಂಕೆ ಶಾಸಕ ಜೆ.ಅಂಬಳಗನ್ ಕೊರೋನದಿಂದಾಗಿ ಮೃತಪಟ್ಟಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು. ಉಸಿರಾಟ ಅಡಚಣೆ ಕಂಡು ಬಂದ ಹಿನ್ನೆಲೆಯಲ್ಲಿ ಜೂನ್ ಎರಡರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರಿಗೆ ಕೊರೋನಾ ಇರುವುದು ದೃಢಪಟ್ಟಿತ್ತು. ಅಲ್ಲಿಂದ ಚೆನ್ನೈ ಇನ್‍ಸ್ಟಿಟ್ಯೂಟ್ ಆಂಡ್ ಮೆಡಿಕಲ್ ಸೆಂಟರ್‌ನ ಐಸಿಯುಗೆ ಸೇರಿಸಲಾಗಿತ್ತು. ಅಂಬಳಗನ್ ಚೆಪ್ಪಾಕ್ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿದ್ದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.