ಕೊರೋನಾ ಸಾವು: ಮೃತದೇಹ ಸಂಸ್ಕಾರಕ್ಕೆ ಚರ್ಚ್ ಕಮಿಟಿಯಿಂದಲೂ ಈಗ ವಿರೋಧ

0
508

ಸನ್ಮಾರ್ಗ ವಾರ್ತೆ

ಕೇರಳ,ಜೂ.10: ಕೊರೋನ ಪೀಡಿತರಾಗಿ ಮೃತಪಟ್ಟ ಡಿನ್ನಿ ಚಾಕೊ(41) ಎಂಬವರ ಮೃತದೇಹ ಸಂಸ್ಕಾರ ಕಾರ್ಯ ತಡವಾಗುತ್ತಿದೆ. ಕೈಸ್ತ ಧರ್ಮ ಆಚಾರದಂತೆ ಚರ್ಚ್‌ನಲ್ಲಿ ಮೃತದೇಹದ ಸಂಸ್ಕರಣೆ ಕಾರ್ಯ ಆಗಬೇಕೆಂದು ಸಂಬಂಧಿಕರು ಹೇಳುತ್ತಿದ್ದರೇ, ಸೆಬಸ್ಟಿಯನ್ ಚರ್ಚ್ ಕಮಿಟಿ ಇದಕ್ಕೆ ಅನುಮತಿ ಕೊಡುತ್ತಿಲ್ಲ.

ಮೃತದೇಹ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಇವತ್ತು ಈ ವಿಷಯದಲ್ಲಿ ತೀರ್ಮಾನವಾಗಬಹುದೆಂಬ ನಿರೀಕ್ಷೆ ಸಂಬಂಧಿಕರು ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಇದಕ್ಕೆ ಸಂಬಂಧಿಸಿದ ಚರ್ಚೆ ನಡೆಯುವ ಸಾಧ್ಯತೆ ಇದೆ. ಚರ್ಚ್ ಪದಾಧಿಕಾರಿಗಳು, ಪಾದ್ರಿಗಳು ಮತ್ತು ಮೃತದೇಹಕ್ಕೆ ಸಂಬಂಧಪಟ್ಟವರು ಚರ್ಚೆಯಲ್ಲಿ ಭಾಗವಹಿಸುವರು ಎನ್ನಲಾಗಿದೆ. ಜಿಲ್ಲಾಧಿಕಾರಿ ಚರ್ಚ್‍ಗೆ ಭೇಟಿ ನೀಡುವ ಸಾಧ್ಯತೆಯೂ ಇದೆ.

ಚರ್ಚ್ ಆಡಳಿತದವರು ಕೊರೋನ ನಿಬಂಧನೆ ಪ್ರಕಾರ 12 ಅಡಿ ಆಳದಲ್ಲಿ ಮೃತದೇಹ ಸಂಸ್ಕರಿಸಲು ಸಾಧ್ಯವಿಲ್ಲ ಎನ್ನುತ್ತಿದ್ದು ಇದು ಮೃತದೇಹ ಸಂಸ್ಕಾರ ಕಾರ್ಯಕ್ಕೆ ಅಡಚಣೆಯಾಗಿದೆ.
ಸೋಮವಾರ ತೃಶೂರ್ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ಡಿನ್ನಿ ಚಾಕೊ ಮೃತಪಟ್ಟಿದ್ದರು.

ಮೇ 12ಕ್ಕೆ ಮಾಲಿ ದ್ವೀಪದಿಂದ ಇವರನ್ನು ಚಿಂತಾಜನಕ ಸ್ಥಿತಿಯಲ್ಲಿ ಕರೆತಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಗಂಭೀರ ಕಿಡ್ನಿರೋಗವಿತ್ತು. ಉಸಿರಾಟ ತೊಂದರೆಯೂ ಇತ್ತು. ನಂತರ ಪರೀಕ್ಷೆ ಮಾಡಿ ನೋಡಿದಾಗ ಕೊರೋನ ಇರುವುದು ಪತ್ತೆಯಾಗಿತ್ತು. ನಂತರ ತೃಶೂರ್ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಕೊಡಲಾಗಿತ್ತು. ಎರಡು ವಾರ ಹಿಂದೆ ಅವರಿಗೆ ವೆಂಟಿಲೇಟರ್‌ನಲ್ಲಿರಿಸಲಾಗಿತ್ತು. ಆದರೆ ಡಿನ್ನಿಯವರ ಪತ್ನಿ-ಮಗ ಕೊರೋನಾದಿಂದ ಗುಣಮುಖರಾಗಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.