ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಜೂ.10: ಕೊರೋನದ ತೀವ್ರ ಹರಡುವಿಕೆಯ ನಡುವೆಯೂ ಭಾರತದಲ್ಲಿ ನಿರಾಳತೆಯ ಕ್ಷಕಿರಣಗಳು ಗೋಚರಿಸುತ್ತಿವೆ. ಭಾರತದಲ್ಲಿ ಕೊರೋನಾ ಪ್ರಕರಣಗಳಲ್ಲಿ ರೋಗದಿಂದ ಗುಣಮುಖರಾದವರು ಕೊರೋನ ರೋಗಿಗಳ ಸಂಖ್ಯೆಗಿಂತ ಹೆಚ್ಚಾಗಿದ್ದಾರೆ. ಒಟ್ಟು 2,76,583 ಪ್ರಕರಣಗಳಲ್ಲಿ ಈಗ ಕೊರೋನ ಇರುವವರು 1,33,632 ಮಂದಿಯಾದರೆ 1,35,206 ಮಂದಿ ಕೊರೋನದಿಂದ ಗುಣಮುಖರಾಗಿದ್ದಾರೆ. ಭಾರತದಲ್ಲಿ ಪ್ರಥಮ ಬಾರಿ ರೋಗಿಗಳಿಗಿಂತ ರೋಗಮುಕ್ತರಾದವರ ಸಂಖ್ಯೆ ಹೆಚ್ಚಾಗಿದೆ. ಈವರಗೆ ಕೊರೋನಕ್ಕೆ ಭಾರತದಲ್ಲಿ 7754 ಮಂದಿ ಮೃತಪಟ್ಟಿದ್ದಾರೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 279 ಮಂದಿ ಕೊರೋನ ಪೀಡಿತರು ಮೃತಪಟ್ಟಿದ್ದಾರೆ. 9,985 ಮಂದಿಗೆ ರೋಗ ದೃಢಪಟ್ಟಿದೆ. 90,787 ಮಂದಿಗೆ ಮಹಾರಾಷ್ಟ್ರದಲ್ಲಿ ಕೊರೋನಾ ಬಾಧಿಸಿದ್ದು ತಮಿಳ್ನಾಡಿನಲ್ಲಿ 34,914 ಕೊರೋನ ಸೋಂಕಿತರಿದ್ದಾರೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ನ ಲೆಕ್ಕಾಚಾರಗಳ ಪ್ರಕಾರ 24 ಗಂಟೆಗಳಲ್ಲಿ 1,45,216 ಸ್ಯಾಂಪಲ್ ಪರೀಕ್ಷಿಸಲಾಗಿದೆ. ಇದುವರೆಗೆ 50,61,332 ಸ್ಯಾಂಪಲ್ಗಳನ್ನು ಪರೀಕ್ಷೆ ಮಾಡಲಾಗಿದೆ. 77 ದಿವಸಗಳ ಲಾಕ್ಡೌನ್ ನಂತರ ಸರಕಾರಿ ಕಚೇರಿಗಳು, ಮಾಲ್ಗಳು, ರೆಸ್ಟೊರೆಂಟ್ಗಳು, ಆರಾಧಾನಾಲಯಗಳನ್ನು ತೆರೆಯಲಾಗಿದ್ದು ಜನಜೀವನ ಸಾಮಾನ್ಯ ಸ್ಥಿತಿಗೆ ಬಂದಿದೆ. ಅಮೇರಿಕ, ಬ್ರಿಟನ್, ರಷ್ಯ, ಇಂಗ್ಲೆಂಡ್ಗಳ ನಂತರ ಹೆಚ್ಚು ಕೊರೋನ ಸೋಂಕಿತ ದೇಶಗಳ ಪಟ್ಟಿಯಲ್ಲಿ ಭಾರತ ಐದನೆ ಸ್ಥಾನದಲ್ಲಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












