ಸನ್ಮಾರ್ಗ ವಾರ್ತೆ
ಗಿಟ್ಟೆಗ,ಜೂ.10: ಆಫ್ರಿಕನ್ ದೇಶ ಬುರುಂಡಿಯ ಅಧ್ಯಕ್ಷ ಪೈರಿ ಕುರುನ್ಸಿಸ್(55) ನಿಧನರಾಗಿದ್ದಾರೆ. ಹೃದಯಘಾತ ಸಾವಿಗೆ ಕಾರಣವಾಗಿದ್ದು ಸರಕಾರಿ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಅವರ ಸಾವಿನ ಕುರಿರು ದೇಶಕ್ಕೆ ತಿಳಿಸಿದೆ. ಪೂರ್ವ ಬುರುಂಡಿಯ ಕರೂಸಿ ಆಸ್ಪತ್ರೆಯಲ್ಲಿ ಅವರು ನಿಧನ ಹೊಂದಿದರು.ಶನಿವಾರ ವಾಲಿಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಆರೋಗ್ಯದಲ್ಲಿ ಏರುಪೇರು ಗೋಚರಿಸಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲದೇ, ರವಿವಾರ ಜನರಿಗೆ ಸಂದರ್ಶನ ನೀಡಿದ್ದರು. ಅವರ ಆರೋಗ್ಯ ಸೋಮವಾರ ಬಿಗಡಾಯಿಸಿದ್ದು, ಹೃದಯಾಘಾತಕ್ಕೊಳಗಾದ ಕುರುನ್ಸಿಸ್ರನ್ನು ರಕ್ಷಿಸಲು ಗರಿಷ್ಠ ಶ್ರಮ ವಹಿಸಲಾಗಿದೆ ಎಂದು ಆಸ್ಪತ್ರೆಯ ವೈದಾಧಿಕಾರಿಗಳು ತಿಳಿಸಿದರು.
ಹತ್ತು ವರ್ಷಗಳ ಜನಾಂಗೀಯ ಸಂಘರ್ಷದ ಬಳಿಕ ಬಂಡುಕೋರ ನಾಯಕ 2005ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಏರಿದ್ದರು. ಸಂಘರ್ಷದಲ್ಲಿ ಮೂರು ಲಕ್ಷ ಮಂದಿ ಕೊಲ್ಲಲ್ಪಟ್ಟಿದ್ದರು. ಮೂರನೆ ಬಾರಿ ಅಧಿಕಾರ ಉಳಿಸುವ ನಿಟ್ಟಿನಲ್ಲಿ ಜನಮತ ಸಂಗ್ರಹಕ್ಕೆ ಹೊರಟಿದ್ದ ಕುರುನ್ಸಿಸ್ ವಿರುದ್ಧ ದೇಶದಲ್ಲಿ ದೊಡ್ಡ ಪ್ರತಿಭಟನೆ ಎದ್ದಿತ್ತು. ನಂತರ ನಡೆದ ಘರ್ಷಣೆಯಲ್ಲಿ ನೂರರಷ್ಟು ಮಂದಿ ಹತರಾಗಿದ್ದರು. ಸಾವಿರಾರು ಮಂದಿ ಪಲಾಯನಗೈದಿದ್ದರು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












