ಆಸ್ಪತ್ರೆಯಿಂದ ತಪ್ಪಿಸಿಕೊಂಡ ಕೊರೋನ ಸೋಂಕಿತ; ಆತ್ಮಹತ್ಯೆಗೆ ಯತ್ನ

0
566

ಸನ್ಮಾರ್ಗ ವಾರ್ತೆ

ತಿರುವನಂತಪುರಂ,ಜೂ.10: ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಕೊರೋನ ಐಸೊಲೇಶನ್ ವಾರ್ಡಿನಿಂದ ತಪ್ಪಿಸಿಕೊಂಡಿದ್ದ ರೋಗಿ ಆತ್ಮಹತ್ಯೆಗೆ ಯತ್ನಿಸಿದ್ದು, ಇಂದು ಬೆಳಗ್ಗೆ ಕೊರೋನ ವಾರ್ಡಿನಿಂದ ತಪ್ಪಿಸಿಕೊಂಡಿದ್ದ ಅನಡಿ ಎಂಬಲ್ಲಿನ ವ್ಯಕ್ತಿ ನೇಣುಹಾಕಿಕೊಂಡು ಸಾಯಲು ಯತ್ನಿಸಿದ್ದನು. ಆಸ್ಪತ್ರೆಯ ಸಿಬ್ಬಂದಿ ಬಂದು ಆತನ ಯತ್ನವನ್ನು ವಿಫಲಗೊಳಿಸಿದ್ದಾರೆ. ತದನಂತರ ಈತನನ್ನು ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ. ಕೊರೋನ ದೃಢಪಟ್ಟ ನಂತರ ತಿರುವನಂತಪುರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆಯಿಂದ ಹೇಳದೆ ಕೇಳದೆ ಈತ ಹೊರಟು ಹೋಗಿದ್ದ. ಬಸ್‍ನಲ್ಲಿ ಈತ ಊರಿಗೆ ತಲುಪಿದ್ದ. ಸುಮಾರು 22 ಕಿಲೋ ಮೀಟರ್ ಬಸ್‍ನಲ್ಲಿ ಪ್ರಯಾಣಿಸಿದ್ದಾನೆ. ಅನಡಿಯಲ್ಲಿ ಬಸ್ಸಿನಿಂದ ಇಳಿದಾಗ ಊರಿನವರು ತಡೆದರು. ನಂತರ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಪೊಲೀಸರು ಈತನನ್ನು ಆಂಬುಲೆನ್ಸ್‌ನಲ್ಲಿ ಪುನಃ ಆಸ್ಪತ್ರೆಗೆ ಕಳುಹಿಸಿದ್ದರು. ಅತೀವ ಸುರಕ್ಷೆಯಿರುವ ಕೊರೋನ ವಾರ್ಡಿನಿಂದ ಈತ ಹೇಗೆ ಹೊರಗೆ ತಪ್ಪಿಸಿಕೊಂಡ ಎಂಬುದು ಸ್ಪಷ್ಟವಾಗಿಲ್ಲ. ಘಟನೆಯಲ್ಲಿ ಮೆಡಿಕಲ್ ಕಾಲೇಜಿನಿಂದಾದ ಲೋಪಕ್ಕೆ ಅನಡಿ ಪಂಚಾಯತ್ ಅಧ್ಯಕ್ಷರು ವಿಷಾದ ಸೂಚಿಸಿದ್ದಾರೆ.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.