ಅಸ್ಸಾಂ ತೈಲ ಬಾವಿ ಸೋರಿಕೆ; ಇಬ್ಬರು ಅಗ್ನಿಶಾಮಕದಳದ ಅಧಿಕಾರಿಗಳ ಮೃತದೇಹ ಪತ್ತೆ

0
559

ಸನ್ಮಾರ್ಗ ವಾರ್ತೆ

ಗುವಾಹಟಿ,ಜೂ.10: ಅಸ್ಸಾಮಿನ ತೈಲಬಾವಿಗೆ ಬೆಂಕಿ ಹಿಡಿಯುವುದರ ನಡುವೆ ನಾಪತ್ತೆಯಾಗಿದ್ದ ಅಗ್ನಿಶಾಮಕ ದಳದ ಇಬ್ಬರು ಅಧಿಕಾರಿಗಳ ಮೃತದೇಹ ಪತ್ತೆಯಾಗಿದೆ. ಆಯಿಲ್ ಇಂಡಿಯಾ ಲಿಮಿಟೆಡ್‍ನ ಸಮೀಪದಲ್ಲಿ ಮೃತದೇಹಗಳು ಪತ್ತೆಯಾಗಿವೆ.14 ದಿವಸ ಹಿಂದೆ ಟಿನ್ಸೂಕಿಯ ಜಿಲ್ಲೆಯ ಆಯಿಲ್ ಇಂಡಿಯಾ ಲಿಮಿಟೆಡ್‍ನಲ್ಲಿ ಅನಿಲ ಸೋರಿಕೆಯಾಗಿತ್ತು. ಮಂಗಳವಾರ ಬೆಂಕಿ ಹಿಡಿದಿತ್ತು. ಅನಿಲ ಸೋರಿಕೆ ತಡೆಯಲು ಆಗದ್ದಿದ್ದುದರಿಂದ ಬೆಂಕಿ ಆರಿಸಲು ಆಗಿರಲಿಲ್ಲ. ಒಂದೂವರೆ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಆರು ಸಾವಿರದಷ್ಟು ಮಂದಿಯನ್ನು ಬೇರೆಡೆಗೆ ಸ್ಥಾಳಾಂತರಿಸಲಾಗಿತ್ತು.

ಅಗ್ನಿ ಶಾಮಕದೊಂದಿಗೆ ನೌಕಾಸೇನೆಯೂ ರಾಜ್ಯ ಸರಕಾರದ ಮನವಿಯ ಹಿನ್ನೆಲೆಯಲ್ಲಿ ಬಂದಿತ್ತು. ಸಿಂಗಾಪುರದ ತಜ್ಞರು ತೈಲಬಾವಿ ಸೋರಿಕೆ ತಡೆಯಲು ಹೊರಟಿದ್ದಾರೆ. ಅನಿಲ ಸೋರಿಕೆ ಪರಿಹರಿಸಲು ತೈಲಬಾವಿ ಮುಚ್ಚುವುದಿದ್ದರೂ ನಾಲ್ಕು ವಾರಗಳ ಸಮಯಾವಕಾಶವಾದರೂ ಬೇಕಾಗಬಹುದು ಎನ್ನಲಾಗುತ್ತಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.