‘ಮೀಸಲಾತಿ’ ಮೂಲಭೂತ ಹಕ್ಕಲ್ಲ: OBC ಕೋಟಾ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್!

0
604

ಸನ್ಮಾರ್ಗ ವಾರ್ತೆ

ತಮಿಳುನಾಡು ವೈದ್ಯಕೀಯ ಕಾಲೇಜುಗಳಲ್ಲಿ ಒಬಿಸಿಗಳಿಗೆ 50% ಮೀಸಲಾತಿ ನೀಡದಿರುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಮನವಿಗಳನ್ನು ತಿರಸ್ಕರಿಸುವಾಗ ಮೀಸಲಾತಿ ಹಕ್ಕು ಮೂಲಭೂತ ಹಕ್ಕು ಅಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಮತ್ತೊಮ್ಮೆ ಹೇಳಿದೆ.

ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್, ಕೃಷ್ಣ ಮುರಾರಿ ಮತ್ತು ಎಸ್ ರವೀಂದ್ರ ಭಟ್ ಅವರ ಸುಪ್ರೀಂ ಕೋರ್ಟ್ ನ್ಯಾಯಪೀಠವು, “ಮೀಸಲಾತಿ ಹಕ್ಕು ಮೂಲಭೂತ ಹಕ್ಕು ಅಲ್ಲ” ಎಂದು ಹೇಳಿದರು‌.

ಯಾರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ? 32 ನೇ ವಿಧಿ ಮೂಲಭೂತ ಹಕ್ಕಿನ ಉಲ್ಲಂಘನೆಗಾಗಿ ಮಾತ್ರ ಲಭ್ಯವಿದೆ. ನೀವೆಲ್ಲರೂ ತಮಿಳುನಾಡಿನ ನಾಗರಿಕರ ಮೂಲಭೂತ ಹಕ್ಕುಗಳ ಬಗ್ಗೆ ಆಸಕ್ತಿ ಹೊಂದಿದ್ದೀರಿ ಎಂದು ನಾವು ಭಾವಿಸುತ್ತೇವೆ” ಎಂದು ಡಿಎಂಕೆ ಅರ್ಜಿದಾರರಿಗೆ ಉತ್ತರಿಸುವಾಗ ನ್ಯಾಯಾಲಯ ಹೇಳಿದೆ.

ಅಖಿಲ ಭಾರತ ಕೋಟಾದಲ್ಲಿ2020-21ರಲ್ಲಿ ಪದವಿ ಪೂರ್ವ, ಪದವಿ ಮತ್ತು ದಂತ ಶಿಕ್ಷಣ, ಹುದ್ದೆಗಾಗಿ ರಾಜ್ಯವು ನೀಡಿರುವ ವೈದ್ಯಕೀಯ ಸ್ಥಾನಗಳಲ್ಲಿ ತಮಿಳುನಾಡು ಕಾನೂನಿನ ಪ್ರಕಾರ ಒಬಿಸಿಗಳಿಗೆ 50% ಮೀಸಲಾತಿ ನೀಡದಿರುವುದರಿಂದ ಕೇಂದ್ರ ಸರಕಾರದ ನಿರ್ಧಾರದ ವಿರುದ್ಧ ವಿವಿಧ ರಾಜಕೀಯ ಪಕ್ಷಗಳು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಡಿಎಂಕೆ, ವೈಕೊ, ಅನ್ಬುಮಣಿ ರಾಮದಾಸ್, ಸಿಪಿಐ (ಎಂ), ತಮಿಳುನಾಡು ಕಾಂಗ್ರೆಸ್ ಮತ್ತು ಸಿಪಿಐ ಪರ ವಕೀಲರು ತಮ್ಮ ಮನವಿಯೊಂದಿಗೆ ಮದ್ರಾಸ್ ಹೈಕೋರ್ಟ್ ಅನ್ನು ಸಂಪರ್ಕಿಸಲು ಸ್ವತಂತ್ರರು ಎಂದು ನ್ಯಾಯಾಲಯ ಹೇಳಿದೆ.

ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಪದವಿ, ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ಶಿಕ್ಷಣಕ್ಕಾಗಿ ಅಖಿಲ ಭಾರತ ಕೋಟಾದಲ್ಲಿ ತಮಿಳುನಾಡಿನಲ್ಲಿರು ಉಪಲಬ್ಧ ಸ್ಥಾನಗಳಲ್ಲಿ ಒಬಿಸಿಗೆ 50% ಮೀಸಲಾತಿ ನೀಡದಿರುವ ಕೇಂದ್ರದ ನಿರ್ಧಾರವನ್ನು ರಾಜಕೀಯ ಪಕ್ಷಗಳು ಪ್ರಶ್ನಿಸಿವೆ.

 

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.