ಸನ್ಮಾರ್ಗ ವಾರ್ತೆ
ಕೃಷ್ಣಗಂಜ್,ಜೂ.11: ಬಿಹಾರ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ 32 ಸೀಟುಗಳಿಗೆ ಆಲ್ ಇಂಡಿಯಾ ಮಜ್ಲಿಸೇ ಇತ್ತಿಹಾದುಲ್ ಮುಸ್ಲಿಮೀನ್(AIMIM) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಹೊರತಂದಿದೆ. 22 ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯಿದ್ದು, ಕೃಷ್ಣಗಂಜ್‍ನ ಪಾರ್ಟಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ AIMIM ಬಿಹಾರ ಅಧ್ಯಕ್ಷ ಅಕ್ತರುಲ್ ಇಮಾನ್ ಪಟ್ಟಿಯನ್ನು ಬಿಡುಗಡೆಗೊಳಿಸಿದರು. ಕಟಿಹಾರ, ಪೂರ್ನಿಯ, ದರ್ಭಂಗ್, ಸಮಷ್ಟಿಪುರ, ಪಟ್ನಾಗಳ ಅಭ್ಯರ್ಥಿಗಳೂ ಪಟ್ಟಿಯಲ್ಲಿ ಒಳಗೊಂಡಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












