ಕೊರೋನ ರೋಗಿಗಳು ಪ್ರಾಣಿಗಳಲ್ಲ: ದೆಹಲಿ ಸರಕಾರವನ್ನು ತರಾಟೆಗೆತ್ತಿಕೊಂಡ ಸುಪ್ರೀಮ್ ಕೋರ್ಟ್

0
588

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜೂ.12: ಸುಪ್ರೀಮ್ ಕೋರ್ಟು ಸರಕಾರವನ್ನು ತರಾಟೆಗೆತ್ತಿಕೊಂಡಿದೆ. ಕೊರೋನ ರೋಗಿಗಳೊಂದಿಗೆ ಪ್ರಾಣಿಗಿಂತಲೂ ಕೀಳಾಗಿ ವರ್ತಿಸಲಾಗುತ್ತಿದೆ. ಅವರ ಮೃತದೇಹ ನಿರ್ವಹಿಸುವಾಗ ಅಗೌರವ ತೋರಿಸುವುದು ಸಹಿತ ಇತರ ವಿಷಯಗಳಲ್ಲಿ ಸ್ವಪ್ರೇರಣೆಯಿಂದ ದಾಖಲಿಸಿಕೊಂಡ ಪ್ರಕರಣದಲ್ಲಿ ಸುಪ್ರೀಂಕೋರ್ಟು ಹೀಗೆ ಹೇಳಿದೆ.

“ಕೊರೋನ ರೋಗಿಗಳೊಡನೆ ಪ್ರಾಣಿಗಳಂತೆ ವರ್ತಿಸಲಾಗುತ್ತಿದೆ. ಒಂದು ಪ್ರಕರಣದಲ್ಲಿ ಮೃತದೇಹ ಕೊಳಚೆ ಗುಂಡಿಯಲ್ಲಿ ಸಿಕ್ಕಿತು. ರೋಗಿಗಳು ಮೃತಪಟ್ಟರೆ ಅವರೆಡೆಗೆ ತಿರುಗಿ ನೋಡಲು ಯಾರೂ ಇಲ್ಲ ಎಂದು ಸುಪ್ರೀಂಕೋರ್ಟು ಎಂದು ವಿಮರ್ಶೆ ಮಾಡಿತು. ಕೊರೋನ ರೋಗಿಗಳನ್ನು ಚಿಕಿತ್ಸೆ ನೀಡುವ ದಿಲ್ಲಿಯ ಸರಕಾರಿ ಆಸ್ಪತ್ರೆಯ ಸ್ಥಿತಿ ದಯನೀಯವಾಗಿದೆ. ದಿಲ್ಲಿಯಲ್ಲಿ ಕೊರೋನಾ ಪರೀಕ್ಷೆಯಲ್ಲಿ ಇರುವ ಕೊರತೆಗಳ ಬಗ್ಗೆ ವಿವರಣೆ ನೀಡಲು ಅರವಿಂದ್ ಕೇಜ್ರಿವಾಲ್ ಸರಕಾರಕ್ಕೆ ಕೋರ್ಟ್ ಆದೇಶ ನೀಡಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.